ಯೂತ್ ಹಾಸ್ಟೆಲ್ ಸಭೆ 29ರಂದು
ಶಿವಮೊಗ್ಗ: ನಗರದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಸರ್ವಸದಸ್ಯರ ಸಭೆಯನ್ನು ಜೂ.29ರಂದು ಸಂಜೆ 6.30 ಗಂಟೆಗೆ ನಗರದ ಮಥುರಾ ಪ್ಯಾರಾಡೈಸ್ನಲ್ಲಿ ಘಟಕದ ಅಧ್ಯಕ್ಷ ಅ.ನಾ.ವಿಜಯೇಂದ್ರ ರಾವ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ರಚನೆ ಹಾಗೂ ಅಂತಾರಾಷ್ಟ್ರೀಯ ಚಾರಣದಲ್ಲಿ ಭಾಗವಹಿಸಿದ ಸಾಹಸಿಗಳಿಗೆ, ಹಿಮಾಲಯ ಪ್ರಕೃತಿ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಧಾರವಾಡದ ಸಾಹಸಿ ಅಂತಾರಾಷ್ಟ್ರೀಯ ಚಾರಣಿಗ ಹೇಮಂತ್ ಗೋಖಲೆ ಅವರನ್ನು ಗೌರವಿಸಲಾಗುವುದು. ಎಲ್ಲಾ ಸದಸ್ಯರು ಆಗಮಿಸುಂತೆ ಕೋರಿದ್ದಾರೆ.
ಭೂಪರಿಗ್ರಹ ಕಾರ್ಯಕ್ರಮ 29ರಂದು
ಹೊಸನಗರ: ಇಲ್ಲಿನ ಶ್ರೀರಾಮಚಂದ್ರಾಪುರ ಮಠದ ಹೊಸನಗರ ಪ್ರಧಾನ ಮಠದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪುನರ್ ನವ ನಿರ್ಮಾಣ ಕಾರ್ಯಕ್ಕೆ 29ರಂದು ಭೂಪರಿಗ್ರಹ ಕಾರ್ಯಕ್ರಮ ನಡೆಯಲಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ. ಪುನರ್ನವ ಸಮಿತಿಯ ನೇತೃತ್ವದ ಕಾರ್ಯಕ್ರಮದಲ್ಲಿ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗ್ಗೆ 11.47 ಗಂಟೆಗೆ ಸಮಸ್ತ ಶಿಷ್ಯಭಕ್ತರ ಸಮಕ್ಷಮ ಈ ವಿಶೇಷ ಕಾರ್ಯಕ್ರಮ ಜರುಗಲಿದೆ. 2.30 ಗಂಟೆಯಿಂದ ಶ್ರೀಭಾರತೀ ಗುರುಕುಲದ ಅಮೃತಮಯೀ ಸಭಾಭವನದಲ್ಲಿ ಶಿಷ್ಯಭಕ್ತರಿಂದ ಬೊಗಸೆ ನಾಣ್ಯ ಸಮರ್ಪಣೆ ಕಾರ್ಯಕ್ರಮವಿದೆ. ಸೇವೆ ಸಲ್ಲಿಸುವ ಸುವರ್ಣ ಅವಕಾಶಕ್ಕೆ ಎಲ್ಲರೂ ಭಾಗಿಗಳಾಗಬೇಕು ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

