ಶಿವಮೊಗ್ಗ

ರಾಜಕಾರಣಿಗಳಿಂದಲೇ ಅರಣ್ಯ ನಾಶ: ಸ್ವಾಧಿ

Published On :

ಸೊರಬ: ಹಿಂದಿನ ರಾಜಮಹಾರಾಜರು ಗಿಡ ನೆಡೋ ಕೆಲಸ ಮಾಡಿದರು. ಈಗಿನ ರಾಜಕಾರಣಿಗಳು ಗಿಡ ಕಡಿಯೋ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಮಾಜವಾದಿ ಹಿರಿಯ ಚಿಂತಕ ಎಂ.ಜಿ. ಸ್ವಾಧಿ ಹೇಳಿದರು.
ಚಂದ್ರಗುತ್ತಿ ರೇಣುಕಾಂಬ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ, ಗ್ರಾಪಂ ಆಡಳಿತ ಹಾಗೂ ಶಾಲಾ ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರ ಚಿಂತಕಿ ಸುನಂದಾ ದೇಸಾಯಿ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಬಸಮ್ಮ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಅರಣ್ಯ ಇಲಾಖೆ ಎಸಿಎಫ್ ಅನ್ವರ್‌ಖಾನ್, ಆರ್‌ಎಫ್‌ಒ ಅಜಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಅಂಗಡಿ ಚಂದ್ರಪ್ಪ, ಸದಸ್ಯ ಎಂ.ಪಿ. ರತ್ನಾಕರ್, ಮುಖಂಡ ಮಣ್ಣತ್ತಿ ಪರಮೇಶ್ವರ್, ಶಾಲಾ ಮುಖ್ಯಶಿಕ್ಷಕ ಬಿ.ಎಫ್. ಸುಳ್ಳಳ್ಳಿ, ಶಿಕ್ಷಕ ಯಶವಂತಪ್ಪ ಮಾತನಾಡಿದರು. ಸ್ಥಳೀಯ ಜೀವವೈವಿಧ್ಯತೆ ಕುರಿತಂತೆ ಶ್ರೀಪಾದ ಬಿಚ್ಚುಗತ್ತಿ ಉಪನ್ಯಾಸ ನೀಡಿದರು.  ಶಾಲಾ ಮಕ್ಕಳಾದ ಶ್ವೇತಾ, ಸುಮಲತಾ, ರೇಖಾ, ಸಚಿನ್, ಸರ್ಫ್ರಾಜ್, ರೋಜಾ ಪರಿಸರ ಗೀತೆ, ಭಾಷಣ ದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.