ರಾಜಕೀಯ ಬಣ್ಣ ಸರಿಯಲ್ಲ
ಸಾಗರ: ಆರೋಗ್ಯ ಇಲಾಖೆ ಸಿಬ್ಬಂದಿ ಹೋರಾಟ ರಾಜಕೀಯ ಪ್ರೇರಿತ ಎಂಬ ಬಣ್ಣ ಬಳಿಯುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯ ವೈದ್ಯ-ಸಿಬ್ಬಂದಿ ತಿಳಿಸಿದ್ದಾರೆ.
ಜು.25 ರಂದು ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೇಲೆ ನಾನು ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಎಂದು ಹೇಳಿಕೊಂಡು ಹಲ್ಲೆ ಮಾಡಿರುವ ಹಿನ್ನೆಲೆ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಸಂಗತಿ ಇಲ್ಲ ಎಂದು ಹೇಳಿದ್ದಾರೆ.
ಆರೋಪಿಗಳು ತಮ್ಮ ತಪ್ಪನ್ನು ಮರೆ ಮಾಚಲು ಡಾ. ಬಿ.ಜಿ. ಸಂಗಂ, ಮ.ಸ. ನಂಜುಂಡಸ್ವಾಮಿ, ಚಂದ್ರಮತಿ ಹೆಗಡೆ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ಆಸ್ಪತ್ರೆಯ ವೈದ್ಯ-ಸಿಬ್ಬಂದಿಗೆ ಪ್ರತಿಭಟನೆ ನಡೆಸುವಂತೆ ಯಾವುದೆ ರೀತಿಯಲ್ಲೂ ಪ್ರಚೋದನೆ ನೀಡಿಲ್ಲ. ಇಲ್ಲಸಲ್ಲದ ಆರೋಪ ಮಾಡುತ್ತಿರುವ ವ್ಯಕ್ತಿಗಳು ತಾವು ನಂಬಿದ ದೇವರಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಉಪವಿಭಾಗೀಯ ಆಸ್ಪತ್ರೆಗೂ ಆರೋಗ್ಯ ಕವಚ-108 ತುರ್ತು ಸೇವೆಯ ವಾಹನಕ್ಕೂ ಆಡಳಿತಾತ್ಮಕವಾಗಿ ಯಾವುದೆ ಸಂಪರ್ಕ ಇರುವುದಿಲ್ಲ. ಆದರೆ, ವಾಹನ ಸೇವೆ ಅಲಭ್ಯವಾದಾಗ ಆಸ್ಪತ್ರೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆದಾಗ ರಾಜಕೀಯ ಪ್ರೇರಿತವಾಗಿ ಎಂದಿಗೂ ಹೋರಾಟ ಮಾಡುವುದಿಲ್ಲ. ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು 175 ತಾಲೂಕು, 30 ಜಿಲ್ಲೆ ಇದೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇರುವುದು ಒಂದು ಜಿಲ್ಲೆ, ಒಂದು ತಾಲೂಕು ಮಾತ್ರ ಎಂಬುದನ್ನು ಮರೆಯಬಾರದು. ವ್ಯವಸ್ಥೆ ಸುಧಾರಣೆಗೆ ನೀವು ನಮ್ಮೊಂದಿಗೆ ಚರ್ಚಿಸಿ ಪರಿಹಾರ ಸೂಚಿಸಿ. ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ ಎಂದು ಉಪವಿಭಾಗೀಯ ಆಸ್ಪತ್ರೆಯ ವೈದ್ಯ-ಸಿಬ್ಬಂದಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

