ಶಿವಮೊಗ್ಗ

ಅಂಬ್ಲಿಗೊಳ ಜಲಾಶಯ ಭರ್ತಿ

Published On :

ತ್ಯಾಗರ್ತಿ: ಗೌತಮಪುರ ಸಮೀಪದ ಅಂಬ್ಲಿಗೊಳ ಜಲಾಶಯ ಭರ್ತಿಯಾಗಿದ್ದು ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. ಕಳೆದ 10-12 ದಿನಗಳಿಂದ ಸಾಕಷ್ಟು ಮಳೆ ಬಿದ್ದ ಕಾರಣ ಭಾನುವಾರ ತಡರಾತ್ರಿಯಿಂದ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹೋಗುತ್ತಿದೆ.
ಸಾಗರ ತಾಲೂಕಿನ ಗಡಿಯಲ್ಲಿರುವ ಈ ಜಲಾಶಯ ಗೌತಮಪುರ, ಭೈರಾಪುರ, ಚೆನ್ನಾಪುರ ಹಾಗೂ ಡ್ಯಾಂ ಕೆಳಭಾಗದ ಸಾಲೂರು ವರೆಗಿನ ರೈತರ ಹೊಲ ಗದ್ದೆಗಳಿಗೆ ಸಾಕಷ್ಟು ನೀರನ್ನು ಒದಗಿಸುವ ನೀರಾವರಿ ಅಣೆಕಟ್ಟು ಇದಾಗಿದೆ.  ಆನಂದಪುರಂ- ಶಿಕಾರಿಪುರ ರಾಜ್ಯಹೆದ್ದಾರಿಯಲ್ಲಿ 18 ಕಿಮೀ ದೂರದಲ್ಲಿರುವ ಈ ಡ್ಯಾಂಅನ್ನು ನೀರಾವರಿಗಾಗಿ ನಿರ್ಮಿಸಲಾಗಿದೆ. ಡ್ಯಾಂನಿಂದ ಗೌತಮಪುರದವರೆಗೆ ಹಿನ್ನೀರು ಸಮುದ್ರದಂತೆ ತುಂಬಿಕೊಂಡಿದ್ದು ಮನ ಮೋಹಕ ದೃಶ್ಯ ಸೃಷ್ಠಿಸಿದೆ.
ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಹೋಗುವ ಕೋಡಿ ಸಹ ಜಲಪಾತದಂತೆ ಕಂಗೊಳಿಸುತ್ತಿದ್ದು, ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಂಭ್ರಮಿಸಲು ಆರಂಭಿಸಿದ್ದಾರೆ. ಮಂಗಳವಾರ ರಂಜಾನ್ ಹಬ್ಬದ ಪ್ರಯುಕ್ತ ರಜೆ ಇರುವ ಕಾರಣ ಹಲವು ಪ್ರವಾಸಿಗರು ಕುಟುಂಬ ಸಹಿತ ಇಲ್ಲಿಗೆ ಆಗಮಿಸಿ ಡ್ಯಾಂ ಮೇಲೆ ಓಡಾಡಿ, ಕೋಡಿ ನೀರಿನ ಪ್ರವಾಹ ವೀಕ್ಷಣೆ ಮಾಡುತ್ತಾ ಕಾಲ ಕಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.