ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
ಶಿವಮೊಗ್ಗ: ಅಮರನಾಥ ಯಾತ್ರೆ ಸುಖವಾಗಿ ಪೂರ್ಣಗೊಳ್ಳಲು ತೀರ್ಥಯಾತ್ರಿಕರಿಗೆ ಭದ್ರತೆ ಒದಗಿಸಬೇಕು ಮತ್ತು ಯಾತ್ರೆ ನಿಲ್ಲಿಸಲು ಪ್ರಯತ್ನಿಸುತ್ತಿರುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸಂಘಟನೆಯ ಸದಸ್ಯರು ಯಾತ್ರಾರ್ಥಿಗಳ ಮೇಲೆ ದಾಳಿ ಮಾಡುವವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ನಿಲ್ಲಿಸುವ ಉದ್ದೇಶದಿಂದ ಕಟ್ಟರ್ವಾದಿಗಳು ಪದೇ ಪದೇ ತೀರ್ಥಯಾತ್ರಿಕರ ಮೇಲೆ ದಾಳಿ ನಡೆಸುತ್ತಾರೆ. ಜುಲೈ 18ರಂದು ಬಾಲತಾಲದಲ್ಲಿ ತೀರ್ಥಯಾತ್ರಿಕರ ಮೇಲೆ ಮಾಡಿದ ದಾಳಿಯಿಂದ 24 ಜನರು ಗಾಯಗೊಂಡರು. ಈ ಸಂದರ್ಭದಲ್ಲಿ ಕಟ್ಟರ್ವಾದಿಗಳು ಭೋಜನದ ವ್ಯವಸ್ಥೆಯನ್ನು ಮಾಡುವ ಲಂಗರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ಡೇರೆಗಳನ್ನು ಧ್ವಂಸಗೈಯ್ಯಲಾಯಿತು. ಸರಕಾರ ಈ ಪ್ರಕರಣವನ್ನು ಸ್ಥಳೀಯ ವಾದ-ವಿವಾದ ಎಂದು ಹೇಳಿ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶ ಹಾಗೂ ಕಾಶ್ಮೀರದ ಕೆಲವು ಪ್ರದೇಶಗಳನ್ನು ತನ್ನ ಪ್ರದೇಶವೆಂದು ತೋರಿಸಿ ವಿಕೃತ ನಕಾಶೆ ಪ್ರಕಟಿಸಿದ ಚೀನಾಗೆ ಪಾಠ ಕಲಿಸಲು ಅದರ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕಾರ ಹಾಕಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಯೋಗೀಶ್, ಶಬರೀಶ್, ರಂಗನಾಥ್, ಕುಮಾರ, ರಾಜು, ಸುಧಾ ಕಾಮತ್, ಪ್ರಭಾ ಕಾಮತ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

