ಶಿವಮೊಗ್ಗ

ಆಶ್ರಯ ನಿವೇಶನ ಮಾಹಿತಿ ನೀಡಿ

Published On :

ಶಿವಮೊಗ್ಗ: ಆಶ್ರಯ ನಿವೇಶನಕ್ಕೆ ಸಂದಾಯವಾದ ಅರ್ಜಿಗಳನ್ನು ಮಹಾನಗರ ಪಾಲಿಕೆ ಪರಿಶೀಲನೆ ಮಾಡುತ್ತಿದ್ದು, ಈ ಬಗ್ಗೆ ಯಾವ ಅರ್ಜಿದಾರರಿಗೂ ಸೂಕ್ತ ಮಾಹಿತಿ ಇರುವುದಿಲ್ಲ. ಕೂಡಲೇ ಅರ್ಜಿದಾರರಿಗೆ ಅಗತ್ಯ ಮಾಹಿತಿ ನೀಡುವಂತೆ ಶಾಂತವೇರಿ ಗೋಪಾಲಗೌಡ ಸಾಮಾಜಿಕ ಅಧ್ಯಯನ ಕೇಂದ್ರ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದೆ.
ಶುಕ್ರವಾರ ಸಂಘಟನೆಯ ಪ್ರಮುಖ ಕಲ್ಲೂರು ಮೇಘರಾಜ್ ನೇತೃತ್ವದ ತಂಡ ಮಹಾನಗರ ಪಾಲಿಕೆ ಆಯುಕ್ತ ಮೂಕಪ್ಪ ಕರಭೀಮಣ್ಣನವರ್ ಅವರಿಗೆ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ನಗರದ ಆಶ್ರಯ ನಿವೇಶನಗಳಿಗೆ ಈ ಹಿಂದೆ ಮಹಾನಗರ ಪಾಲಿಕೆಯಿಂದ ಕರೆಯಲಾಗಿದ್ದ ಅರ್ಜಿಗಳ ಪರಿಶೀಲನಾ ಕಾರ್ಯ ಯಾವುದೇ ಅರ್ಜಿದಾರರಿಗೆ ಪೂರ್ವಾನ್ವಯ ಮಾಹಿತಿಯಿಲ್ಲದೇ ನಡೆಯುತ್ತಿದ್ದು, ಅರ್ಹ ಅರ್ಜಿದಾರರ ಬಹುಭಾಗ ಅರ್ಜಿಗಳು ಪರಿಶೀಲನೆಯಾಗದೆ ಅನ್ಯಾಯವೆಸಗಲಾಗುತ್ತಿದೆ ಎಂದು ವಿವರಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಅಂದಾಜು 2 ಸಾವಿರ ಆಶ್ರಯ ನಿವೇಶನಗಳಿಗೆ ಸುಮಾರು 16 ಸಾವಿರ ಅರ್ಜಿಗಳು ಈ ಹಿಂದೆ ನಿವೇಶನ ರಹಿತರಿಂದ ಸಲ್ಲಿಸಲ್ಪಟ್ಟಿತ್ತು. ಮಹಾನಗರ ಪಾಲಿಕೆಯಿಂದ ನಮಗೆ ಆಶ್ರಯ ನಿವೇಶನ ದೊರೆಯಬಹುದೆಂದು ಜಾತಕ ಪಕ್ಷಿಗಳಂತೆ ಬಾಡಿಗೆ ಮನೆಯಲ್ಲಿರುವ ಬಡವರು, ಕೂಲಿ ಕಾರ್ಮಿಕರು ಕಾಯುತ್ತಿದ್ದಾರೆ.
ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ ಇದ್ದ ವಿಳಾಸದಿಂದ ಈಗ ಅರ್ಜಿದಾರರು ಬೇರೆ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಸಂದರ್ಭವಿದ್ದರೆ, ಅರ್ಜಿಗಳು ಸರಿಯಾಗಿ ಪರಿಶೀಲನೆಯಾಗದೆ ವಜಾ ಆಗುವ ಸಾಧ್ಯತೆಗಳಿವೆ. ಬಹುಭಾಗ ಅರ್ಜಿಗಳ ಪರಿಶೀಲನೆಗೆ ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್ ಅರ್ಜಿದಾರರ ಮನೆಗೆ ಬಂದಾಗ ಅರ್ಜಿದಾರರು ಕೂಲಿ ಕೆಲಸಕ್ಕೆ ಹೋಗಿದ್ದ ಉದಾಹರಣೆಗಳೇ ಹೆಚ್ಚು.
ಹಾಗಾಗಿ ಬಿಲ್ ಕಲೆಕ್ಟರುಗಳಿಗೆ ಸರಿಯಾದ ಮಾಹಿತಿ ದೊರೆಯದೇ ಅರ್ಜಿ ಪರಿಶೀಲನಾ ಕಾರ್ಯ ಅಪೂರ್ಣಗೊಳ್ಳುತ್ತದೆ ಎಂದು ಕಲ್ಲೂರು ಮೇಘರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಆಯುಕ್ತರು ಕೂಡಲೆ ಸಂಬಂಧಪಟ್ಟ ಅರ್ಜಿದಾರರಿಗೆ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ನೀಡಿ ಯಾವುದೇ ಒಬ್ಬ ಅರ್ಹ ಅರ್ಜಿದಾರರ ಅರ್ಜಿ ಪರಿಶೀಲನೆಯಾಗದೇ ವಜಾ ಆಗುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.