ಪದಾಧಿಕಾರಿಗಳ ಪದಗ್ರಹಣ ಇಂದು
ಶಿವಮೊಗ್ಗ: ರೋಟರಿ ಕ್ಲಬ್ ಜ್ಯುಬಿಲಿ ಪದಾಧಿಕಾರಿಗಳ ಪದಗ್ರಹಣ ಜುಲೈ 12ರಂದು ಬೆಳಿಗ್ಗೆ 8.30ಕ್ಕೆ ಸವಳಂಗ ರಸ್ತೆಯ ರೋಟರಿ ಯೂತ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಅಶ್ವತ್ಥ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಟರಿ ನೂತನ ಅಧ್ಯಕ್ಷರಾಗಿ ಎಸ್.ಎಲ್.ಲಕ್ಷ್ಮೀಕಾಂತ, ಕಾರ್ಯದರ್ಶಿಯಾಗಿ ಎಂ.ತುಳಸೀರಾಂ ಕಾರ್ಯನಿರ್ವಹಿಸುವರು. ಎಚ್.ಡಿ.ಉದಯಶಂಕರ ಶಾಸ್ತ್ರಿ ಪದವಿ ಪ್ರದಾನ ಮಾಡಲಿದ್ದಾರೆ. ರೋಟರಿ ಸಹಾಯಕ ಗೌ. ಎಸ್.ನರಸಿಂಹ ಪ್ರಸಾದ್ ಉಪಸ್ಥಿತರಿರುವರು ಎಂದರು.
ಅಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ, 2014-15ನೇ ಸಾಲಿನಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಕೈಕೊಳ್ಳಲು ನಿರ್ಧರಿಸಲಾಗಿದೆ. ಪದಗ್ರಹಣ ಸಮಾರಂಭದ ದಿನ ವೈಯುಕ್ತಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವೊಂದರ ಪಿಯುಸಿ ವಿದ್ಯಾರ್ಥಿಗೆ ರು. 20 ಸಾವಿರ ಸಹಾಯಧನ ನೀಡುತ್ತಿದ್ದೇನೆ. ಅದಲ್ಲದೇ ಆತನ ಐದು ವರ್ಷ ವಿದ್ಯಾಭ್ಯಾಸವನ್ನು ರೋಟರಿಯೇ ನೋಡಿಕೊಳ್ಳಲಿದೆ ಎಂದರು.
ಜುಲೈನಲ್ಲಿ ತಾಲೂಕಿನ 8ನೇ ತರಗತಿಯ ಸರ್ಕಾರಿ- ಖಾಸಗಿ ಶಾಲೆಯ 400 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಳಿ ಸಮವಸ್ತ್ರ ವಿತರಿಸಲಾಗುವುದು. ಆಗಸ್ಟ್ನಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ತಾಲೂಕಿನ ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಹಾಗೂ ಸೆಪ್ಟೆಂಬರ್ನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ನಿವೃತ್ತ ಶಿಕ್ಷಕರಿಗಾಗಿ ಕ್ರೀಡಾಕೂಟ ನಡೆಸಲಾಗುವುದು ಎಂದು ಹೇಳಿದರು.
ಅಕ್ಟೋಬರ್ನಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು. ನವೆಂಬರ್ನಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಸುಮಾರು 4 ಸಾವಿರ ಮಕ್ಕಳಿಗಾಗಿ ಪರೀಕ್ಷೆ ಎದುರಿಸುವ ಕುರಿತು ಉಚಿತ ಕಾರ್ಯಾಗಾರ ನಡೆಸಲಾಗುವುದು ಎಂದರು. ಹಾಲಿ ಅಧ್ಯಕ್ಷ ಆರ್.ರೇವಣಸಿದ್ಧಪ್ಪ, ಕಾರ್ಯದರ್ಶಿ ಸಿ.ಕೆ.ಬಾಲಚಂದ್ರ, ಮುಂದಿನ ಕಾರ್ಯದರ್ಶಿ ಎಂ.ತುಳಸೀರಾಂ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

