'ಕೃಷ್ಣಪ್ಪ ಹೋರಾಟ ಶ್ಲಾಘನೀಯ'
ಶಿವಮೊಗ್ಗ: ಬಿ.ಕೃಷ್ಣಪ್ಪ ಅವರು ನಡೆದು ಬಂದ ದಾರಿ, ಹೋರಾಟಗಳ ಮಾಹಿತಿ ಎಲ್ಲಾ ಜನರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬಿ.ಕೃಷ್ಣಪ್ಪ ಅವರ 76ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದಲಿತರನ್ನು ಒಗ್ಗೂಡಿಸುವ ಮತ್ತು ದಲಿತ ಸಮುದಾಯವನ್ನು ಎಚ್ಚರಿಸುವ ಶಿಕ್ಷಣ, ಸಂಘರ್ಷ, ಹೋರಾಟ ಎಲ್ಲವನ್ನೂ ಆರಂಭ ಗೀತೆಯಾಗಿ ಮಾಡಿದ ಕೃಷ್ಣಪ್ಪನವರು ಎಂದರು.
ರಾಜ್ಯಾದ್ಯಂತ ಅಂಬೇಡ್ಕರ್ ಅವರ ಬರಹ, ಬರವಣಿಗೆ, ಯೋಚನೆಗಳನ್ನು ಜನತೆಗೆ ತಿಳಿ ಹೇಳುವಂತೆ ಮಾಡುವಲ್ಲಿ ಬಹಳಷ್ಟು ಯಶಸ್ಸು ಕಂಡವರು. ಆ ದಾರಿ ದೀಪ ಮನಕಲಕುತ್ತದೆ, ಮನೆ ಮನೆ ತಲುಪುತ್ತಿದೆ. ಕೃಷ್ಣಪ್ಪ ಅವರ ಮಾತಿನಲ್ಲಿ ಹೋರಾಟದ ಮನೋಭಾವ ಮತ್ತು ಕ್ರಾಂತಿಯ ಕಿಡಿ ಆರಂಭದ ದಿನದಲ್ಲೇ ಕಾಣಬಹುದಾಗಿತ್ತು. ಅವರ ಅಭಿಪ್ರಾಯಗಳೂ ಕೂಡ ಹಾಗೇ ಇದ್ದವು ಎಂದ ರತ್ನಾಕರ್ ಅವರು, ಬಿ.ಕೃಷ್ಣಪ್ಪನವರ ಕುರಿತ ಪುಸ್ತಕ ಎಲ್ಲಾ ಕಡೆ ವಿತರಿಸುವ ಕೆಲಸವಾಗಲಿ. ನಾನೂ ಸಹ ಜೊತೆಗೆ ಸೇರುತ್ತೇನೆ ಎಂದರು.
ದಲಿತ ಸಂಘರ್ಷ ಸಮಿತಿ ಮುಖಂಡ ಗುರುಮೂರ್ತಿ ಮಾತನಾಡಿ, ಅಂಬೇಡ್ಕರ್ ಪುತ್ಥಳಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ಕೊಡಬೇಕೆಂದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿ.ಪಂ. ಅಧ್ಯಕ್ಷ ಕಲಗೋಡು ರತ್ನಾಕರ, ಮಾವಳ್ಳಿ ಶಂಕರ್, ಅಂಜನಪ್ಪ, ಗುರುಮೂರ್ತಿ, ಹಾಲೇಶಪ್ಪ, ಜಿ.ಪಂ.ಸದಸ್ಯ ಸುಂದರೇಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

