ಶಿಂಧೆ ರಾಜಿನಾಮೆಗೆ ಆಗ್ರಹ
ಶಿಕಾರಿಪುರ: ಕೇಸರಿ ಭಯೋತ್ಪಾದನೆ ಎಂದು ಸಂಬೋಧಿಸುವ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಸುಶೀಲ ಕುಮಾರ್ ಶಿಂಧೆ ಕೂಡಲೇ ಹಿಂದೂ ಸಂತ ಮಹಾತ್ಮರಲ್ಲಿ ಕ್ಷಮೆ ಯಾಚಿಸಿ ಸಚಿವ ಪದವಿಗೆ ರಾಜಿನಾಮೆ ನೀಡುವಂತೆ ಪಟ್ಟಣದ ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ, ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಂಚಾಲಕಿ ಕಾವೇರಿ ರಾಯ್ಕರ್ ಮಾತನಾಡಿ, ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಮಹಾಕುಂಭ ಮೇಳದಲ್ಲಿ ನಡೆಯುತ್ತಿರುವ ಪ್ರಸಿದ್ಧ ಧಾರ್ಮಿಕ ಕಾರ್ಯವನ್ನು ಕೇಸರಿ ಭಯೋತ್ಪಾದನೆ ಎಂದು ಸಂಬೋಧಿಸಿ ಕುಂಭ ಮೇಳದಲ್ಲಿ ಪಾಲ್ಗೊಂಡಿರುವ ಅಸಂಖ್ಯಾತ ಸಂತ ಮಹಾತ್ಮರ ಸಹಿತ 100 ಕೋಟಿಗೂ ಅಧಿಕ ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದರು.
ಮುಸ್ಲಿಂಮರ ಮತದ ಮೇಲೆ ಕಣ್ಣು: ಈ ಹಿಂದೆ ಗೃಹ ಸಚಿವ ಶಿಂಧೆ ಭಾರತದ ಸಂಸತ್ತಿನಲ್ಲಿ ಭಯೋತ್ಪಾದಕ ಹಫೀಜ್ ಸಯ್ಯದ್ನನ್ನು ಮಾನ್ಯಶ್ರೀ ಎಂದು ಗೌರವದಿಂದ ಸಂಬೋಧಿಸಿದ್ದು, ಮುಸ್ಲಿಂ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಗೃಹ ಸಚಿವರಿಗೆ ಭಾರತ ದೇಶದ ಪ್ರಜೆಗಳಿಗಿಂತ ಶತ್ರು ದೇಶ ಪಾಕಿಸ್ಥಾನದ ಭಯೋತ್ಪಾದಕರು ಹೆಚ್ಚು ಆತ್ಮೀಯರಾಗಿದ್ದಾರೆ ಎಂದ ಅವರು ಭಯೋತ್ಪಾದಕರು ದೇಶಭಕ್ತರ ನಡುವಿನ ವ್ಯತ್ಯಾಸ ಅರಿಯದ ಗೃಹ ಸಚಿವರು ದೇಶದ ಆಡಳಿತ ನಡೆಸಲು ಯೋಗ್ಯರೇ ಎಂದು ಪ್ರಶ್ನಿಸಿ ಇಂತಹ ಗೃಹ ಸಚಿವರಿಂದ ಖಂಡಿತವಾಗಿ ದೇಶ ಅಪಾಯದ ಅಂಚಿನಲ್ಲಿದೆ ಎಂದರು.
ಈ ರೀತಿಯ ಅಪಾಯಕಾರಿ, ಬೇಜವಾಬ್ದಾರಿ ಹೇಳಿಕೆ ನೀಡುವ ಗೃಹ ಸಚಿವರು ಸಂತ ಮಹಾತ್ಮರಲ್ಲಿ ಕೂಡಲೇ ಕ್ಷಮೆಯಾಚಿಸ ಬೇಕಾಗಿದೆ ಎಂದ ಅವರು ತಕ್ಷಣ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ಸಂಪುಟದಿಂದ ವಜಾಗೊಳಿಸುವಂತೆ ಅವರು ಒತ್ತಾಯಿಸಿದರು.
ಕೇಂದ್ರ ಸಂಪುಟದಿಂದ ಸುಶೀಲ್ ಕುಮಾರ್ ಶಿಂಧೆ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಪಂ ಅಧ್ಯಕ್ಷ ಹನುಮಂತಪ್ಪ, ಆರೆಸ್ಸೆಸ್ ಮುಖಂಡ ನಾರಾಯಣರಾವ್, ನಾಗರಾಜ ಜೋಯ್ಸ್, ಬೇಗೂರು ಸುಬ್ಬಣ್ಣ, ಶ್ರೀಪತಿ ಭಟ್, ವಿಹಿಂಪ ಸಂಚಾಲಕ ಗಿರೀಶ್ ಧಾರವಾಡದ, ಜಗದೀಶ್, ರಾಮಚಂದ್ರ ಜಾದವ್, ಸವಿತಾ ಸಮಾಜದ ಅಧ್ಯಕ್ಷ ರಘು, ರಮೇಶ್, ಸುಮಿತ್ರಾ, ಮಮತಾ, ವನಿತಾ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

