ಶಿವಮೊಗ್ಗ

ಇಂದಿನಿಂದ ಎನ್‌ಎಸ್‌ಎಸ್ ಶಿಬಿರ

Published On :

ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ತಾಲೂಕಿನ ನಗರದಲ್ಲಿ ಜ.28ರಿಂದ ಫೆ.3ರವರೆಗೆ ನಡೆಯಲಿದೆ. ಶಿಬಿರದ ಅವಧಿಯಲ್ಲಿ ಬಿದನೂರಿನ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅರಿವು ಮತ್ತು ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಕರುಣಾಕರ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಆರ್ಯ ಈಡಿಗ ಸಂಘದ ತಾಲೂಕು ಸಮಿತಿ ರಚನೆಯಾಗಿದೆ. ಅಧ್ಯಕ್ಷರಾಗಿ ಜಿ. ಸುದರ್ಶನ, ಉಪಾಧ್ಯಕ್ಷರಾಗಿ ನಾಗರಾಜ್ ಹೆಬ್ಬೂರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಎನ್. ನಾಗರಾಜ್, ಖಜಾಂಚಿ ಮಾಲತೇಶ್, ಸಲಹೆಗಾರ ಗಣಪತಿ, ಸಹಕಾರ್ಯದರ್ಶಿ ಸತೀಶ್, ಜಗದೀಶ್, ಸಂಘಟನೆ ಕಾರ್ಯದರ್ಶಿ ತಿಪ್ಪೇಸ್ವಾಮಿ, ಮಂಜುನಾಥ್, ಕೆ. ಶೇಖರ್ ಚುನಾಯಿತರಾಗಿದ್ದು, ನಿರ್ದೇಶಕರಾಗಿ ಕೆ.ಎಚ್. ಸೀತಾರಮ್, ಪುರುಷೋತ್ತಮ್, ಪ್ರಭಾಕರ್, ಮುಕುಂದಪ್ಪ, ಶಿವಮೂರ್ತಿ, ಚನ್ನಪ್ಪ., ಎಸ್.ಎಂ. ಶ್ರೀನಿವಾಸ ಮತ್ತು ರಾಮಚಂದ್ರ ನೇಮಕಗೊಂಡಿದ್ದಾರೆ ಎಂದು ಎನ್. ನಾಗರಾಜ್ ತಿಳಿಸಿದ್ದಾರೆ.
ಕುಸುಮಮ್ಮ ಆಯ್ಕೆ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಕುಸುಮಮ್ಮ ಆಯ್ಕೆಯಾಗಿದ್ದಾರೆ. ಇವರಿಗೆ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ರಮೇಶ್ ನೇಮಕ
ಶಿವಮೊಗ್ಗ: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಆದೇಶದ ಮೇರೆಗೆ ರಾಜ್ಯ ಎಸ್.ಎಸಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಇ. ರಮೇಶ್‌ರನ್ನು ನೇಮಕಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ. ಶಿವಪ್ಪ  ತಿಳಿಸಿದ್ದಾರೆ.
ಲಯನ್ಸ್ ಕ್ಲಬ್‌ನಲ್ಲಿ ಗಣರಾಜ್ಯೋತ್ಸವ
ಭದ್ರಾವತಿ: ಸ್ವಾತಂತ್ರ್ಯವನ್ನು ಬ್ರಿಟಿಷರು ನಮಗೆ ಕೊಟ್ಟಿದ್ದಲ್ಲ. ನಮ್ಮ ವಾಕ್‌ಸ್ವಾತಂತ್ರ್ಯ ಕಸಿದುಕೊಂಡಿದ್ದರಿಂದ ಅದನ್ನು ಕೇಳಲು ದನಿಯೆತ್ತುವ ಸಾಹಸ ಮಾಡಲಾಗದೆ ಸುಮ್ಮನಿದ್ದುದನ್ನು ಅವರು ದುರುಪಯೋಗಪಡಿಸಿಕೊಂಡರು ಎಂದು ಎಂದು ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಉಮೇಶ್ ಹೇಳಿದರು.
  ಅವರು ಶನಿವಾರ ಸಂಜೆ ಲಯನ್ಸ್ ಕ್ಲಬ್ ಆಚರಿಸಿದ ಗಣರಾಜ್ಯೋತ್ಸವ, ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿಧಿ ಮತ್ತು ಸಂಸ್ಥಾಪಕ ಸಪ್ತಾಹ, ವಿಶ್ವಶಾಂತಿ ದಿನಾಚರಣೆ ಕುರಿತು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.