ಶಿವಮೊಗ್ಗ

ಬಹುಮಾನ ವಿತರಣೆ

Published On :

ಶಿವಮೊಗ್ಗ: ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಡಾ. ಶಿವಮೊಗ್ಗ ಸುಬ್ಬಣ್ಣ ಅವರ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ದಿ. ರಂಗನಾಯಕಮ್ಮ ಗಣೇಶ್‌ರಾವ್ ದತ್ತಿನಿಧಿ ಕನ್ನಡ ಭಾವಗೀತೆ ಗಾಯನ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಗರದ 26 ಪ್ರೌಢಶಾಲೆಗಳಿಂದ 45, 17 ಪದವಿ ಪೂರ್ವ ಕಾಲೇಜಿನಿಂದ 28 ವಿದ್ಯಾರ್ಥಿಗಳು ಭಾಗವಹಿಸಿದ್ದು, ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಪ್ರೌಢಶಾಲೆಯ ರಮ್ಯಶ್ರೀ ಪವಾರ್ ಪ್ರಥಮ ಸ್ಥಾನ, ಜ್ಞಾನದೀಪ ಪ್ರೌಢಶಾಲೆಯ ಅಚಿಂತ್ಯ ಹೊಳ್ಳ ದ್ವಿತೀಯ ಹಾಗೂ ಧನ್ಯಶ್ರೀ ಅಡಿಗ ತೃತೀಯ, ಸೇಂಟ್‌ಪಾಲ್ಸ್ ಪ್ರೌಢಶಾಲೆಯ ಶ್ರೇಯಾ ಮತ್ತು ಅನ್ವಿತ ಜೋಷಿ ಸಮಾಧಾನಕರ ಬಹುಮಾನ ವಿತರಿಸಲಾಗಿದೆ.
 ಪದವಿ ಪೂರ್ವ ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಆಚಾರ್ಯ ಪದವಿ ಪೂರ್ವ ಕಾಲೇಜಿನ ಅಮಿತ್ ಕುಮಾರ್ ಪ್ರಥಮ ಸ್ಥಾನ, ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನ ಚಾರ್ವಿ ಮುರಳೀಧರ್ ದ್ವಿತೀಯ, ಅವನಿ ನಾಡಿಗ್ ತೃತೀಯ, ಹಾಗೂ ವಿದ್ಯಾಭಾರತಿ ಪದವಿ ಪೂರ್ವ ಕಾಲೇಜಿನ ಮಯೂರಿ ಮತ್ತು ದೇಶೀಯ ವಿದ್ಯಾಶಾಲಾ ಪದವಿ ಪೂರ್ವ ಕಾಲೇಜಿನ ರಾಧಿಕ ಪೊದುವಾಳ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಡಾ.ನಾಗಭೂಷಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.