ಶಿವಮೊಗ್ಗ

ಸರಗಳ್ಳನ ಬಂಧನ

Published On :

ಸಾಗರ: ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದ ಸಮೀಪ ಮಹಿಳೆಯೊಬ್ಬರ ತಾಳಿಸರವನ್ನು ಅಪಹರಿಸಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 ಗುರುವಾರ ನಗರದ ಅರಮನೆಕೇರಿ ವಾಸಿ ಜಯಮ್ಮ ಎಂಬವರು ಗೋಪಾಲಗೌಡ ಕ್ರೀಡಾಂಗಣದ ಹಿಂಬದಿಯ ರಸ್ತೆಯಲ್ಲಿ ಬರುತ್ತಿದ್ದಾಗ ತ್ಯಾಗರ್ತಿ ವಾಸಿ ಮ್ಯೆಕಾನಿಕ್ ಕೆಲಸ ಮಾಡುತ್ತಿರುವ ಸಂದೇಶ್ ಎಂಬಾತ ಬೈಕಿನಲ್ಲಿ ವೇಗವಾಗಿ ಹಿಂದಿನಿಂದ ಬಂದು ಸುಮಾರು 30 ಸಾವಿರ ರು. ಮೌಲ್ಯದ ತಾಳಿಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
    ಮಹಿಳೆ ಕೂಗಿಕೊಂಡಿದ್ದನ್ನು ಕೇಳಿದ ಸಾರ್ವಜನಿಕರು ಸಂದೇಶನನ್ನು ಸುತ್ತುವರೆದಾಗ ಅಲ್ಲಿಯೆ ಇದ್ದ ಅಡಕೆ ತೋಟದಲ್ಲಿ ಅಡಗಿಕೊಂಡಿದ್ದನು.
 ಸಾರ್ವಜನಿಕರಿಂದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೇಟೆ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ ಮತ್ತು ಅಪರಾಧ ಪತ್ತೆದಳದ ಸಿಬ್ಬಂದಿ ತೋಟದಲ್ಲಿ ಅಡಗಿಕೊಂಡಿದ್ದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಬೈಕ್, ಒಂದು ಮೊಬೈಲ್ ಹಾಗೂ ತಾಳಿಸರ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.