ಮದ್ಯವರ್ಜನ ಶಿಬಿರ ಹೆಮ್ಮೆಯ ಸಂಗತಿ
ಶಿರಾಳಕೊಪ್ಪ: ವಿದ್ಯಾಸಂಸ್ಥೆಗಳ ನಿರ್ಮಾಣ ಮಾಡುವ ಮೂಲಕ ವಿದ್ಯಾದಾನ, ಸಾಮೂಹಿಕ ಮದುವೆ, ಮದ್ಯವರ್ಜನ ಶಿಬಿರದಂತಹ ಕಾರ್ಯಕ್ರಮಗಳನ್ನು ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮುಖಾಂತರ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಧರ್ಮಸ್ಥಳ ಗ್ರಾ.ಯೋ.ನಾಗೇಶ್ ತಿಳಿಸಿದರು.
ಸಮೀಪದ ನೇರಲಗಿ ವೀರಭದ್ರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿಕಾರಿಪುರ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಭಾಗವಹಿಸಿದ ಮದ್ಯವ್ಯಸನಿಗಳಿಗೆ ಶುಭಹಾರೈಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಶೇಖರಗೌಡ, ಮದ್ಯವ್ಯಸನಿಗಳ ಮನಪರಿವರ್ತಿಸುವ ಕಾರ್ಯಕ್ರಮದಿಂದ ಹಿಂದೆ ಹಲವಾರು ಮದ್ಯವ್ಯಸನಿಗಳು ಕುಡಿತ ಬಿಟ್ಟಿದ್ದಾರೆ ಎಂದರು. ಮಹೇಂದ್ರ ಮಾತನಾಡಿದರು.
ಶಿಬಿರದಲ್ಲಿ ಕೆಲ ಮದ್ಯವ್ಯಸನಿಗಳು ಬಾಗಿಲು ಮುರಿದು ಪರಾರಿಯಾಗಲು ಪ್ರಯತ್ನಿಸಿ, ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ವಿಫಲರಾಗಿದ್ದಾರೆ. ಮಂಗಳವಾರದಿಂದ ನಿಯಮಿತವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

