ವರ್ತಕರಿಗೆ ಲೈಸೆನ್ಸ್ ಕಡ್ಡಾಯ
ಶಿವಮೊಗ್ಗ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿಯ ತಿದ್ದುಪಡಿ ಆದೇಶದಂತೆ ಜಿಲ್ಲೆಯಲ್ಲಿರುವ ಬತ್ತ, ಅಕ್ಕಿ, ದ್ವಿದಳ ಧಾನ್ಯ, ಖಾದ್ಯ ತೈಲ, ಎಣ್ಣೆಬೀಜ ಹಾಗೂ ಅಗತ್ಯ ವಸ್ತುಗಳ ಸಗಟು, ಚಿಲ್ಲರೆ ಕಮಿಷನ್ ಏಜೆಂಟರು, ವರ್ತಕರು ಹಾಗೂ ಉತ್ಪಾದಕರು ಸಕ್ಷಮ ಪ್ರಾಧಿಕಾರಿಗಳಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕೆಂದು ಅಂತಿಮವಾಗಿ ಸೂಚಿಸಿದೆ.
ಪರವಾನಗಿ: ಇದಕ್ಕೆ ಸಂಬಂಧಿಸಿ ಅಗತ್ಯ ವಸ್ತುಗಳ ಸಗಟು, ಚಿಲ್ಲರೆ ಕಮಿಷನ್ ಏಜೆಂಟರು, ವರ್ತಕರು ಹಾಗೂ ಉತ್ಪಾದಕರಿಗೆ ಸೂಚನೆ ನೀಡಿದ ನಂತರವೂ ಸಗಟು ಮತ್ತು ಚಿಲ್ಲರೆ ವಹಿವಾಟುದಾರರು ಪರವಾನಿಗೆ ಪಡೆಯದೇ ವ್ಯವಹಾರ ನಡೆಸುತ್ತಿರುವುದು ಹಾಗೂ ದಾಸ್ತಾನಿಸಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೊದಲು ಪರವಾನಗಿ ಪಡೆದು ವ್ಯವಹರಿಸುವಂತೆ ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಸೂಚಿಸಿದ್ದಾರೆ.
ವಹಿವಾಟು: ಸಗಟು ಮತ್ತು ಚಿಲ್ಲರೆ ಪರವಾನಗಿ ಹೊಂದಲು ದಾಸ್ತಾನು ಮಿತಿಯನ್ನು ನಿಗದಿಗೊಳಿಸಲಾಗಿದೆ. ದ್ವಿದಳ ಧಾನ್ಯಗಳ ಚಿಲ್ಲರೆ ವಹಿವಾಟುದಾರರು 5 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು ಒಂದು ಸಾವಿರ ಕ್ವಿಂಟಲ್, ಖಾದ್ಯತೈಲ ಚಿಲ್ಲರೆ ವಹಿವಾಟುದಾರರು 5 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು 800 ಕ್ವಿಂಟಲ್, ಎಣ್ಣೆಬೀಜ ಚಿಲ್ಲರೆ ವಹಿವಾಟುದಾರರು 5 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು ಒಂದು ಸಾವಿರ ಕ್ವಿಂಟಲ್, ಅಕ್ಕಿ ಮತ್ತು ಬತ್ತ ಚಿಲ್ಲರೆ ವಹಿವಾಟುದಾರರು 5 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು ಒಂದು ಸಾವಿರ ಕ್ವಿಂಟಲ್.
ಚಿಲ್ಲರೆ ವಹಿವಾಟು: ಸಗಟು, ಚಿಲ್ಲರೆ ಕಮಿಷನ್ ಏಜೆಂಟರು, ವರ್ತಕರು ಹಾಗೂ ಉತ್ಪಾದಕರು ಒಂದು ನಿರ್ದಿಷ್ಟ ಸಮಯಕ್ಕೆ ಈ ಮಿತಿಯನ್ನು ಮೀರದಿರುವಂತೆ ಅವರು ಸೂಚಿಸಿದ್ದಾರೆ.
ದ್ವಿದಳ ಧಾನ್ಯಗಳ ಒಂದೇ ಚಿಲ್ಲರೆ ವಹಿವಾಟುದಾರರು 50 ಕ್ವಿಂಟಲ್, ಒಂದಕ್ಕಿಂತ ಹೆಚ್ಚಿನ ಚಿಲ್ಲರೆ ವಹಿವಾಟು ಕೇಂದ್ರದವರು 200 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು 2 ಸಾವಿರ ಕ್ವಿಂಟಲ್, ಖಾದ್ಯತೈಲ ಒಂದೇ ಚಿಲ್ಲರೆ ವಹಿವಾಟುದಾರರು 50 ಕ್ವಿಂಟಲ್, ಒಂದಕ್ಕಿಂತ ಹೆಚ್ಚಿನ ಚಿಲ್ಲರೆ ವಹಿವಾಟು ಕೇಂದ್ರದವರು 150 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು 1200 ಕ್ವಿಂಟಲ್, ಎಣ್ಣೆಬೀಜ ಒಂದೇ ಚಿಲ್ಲರೆ ವಹಿವಾಟುದಾರರು 50 ಕ್ವಿಂಟಲ್, ಒಂದಕ್ಕಿಂತ ಹೆಚ್ಚಿನ ಚಿಲ್ಲರೆ ವಹಿವಾಟು ಕೇಂದ್ರದವರು 150 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು 2 ಸಾವಿರ ಕ್ವಿಂಟಲ್, ದ್ವಿದಳ ಧಾನ್ಯಗಳ ಗಿರಣಿಯವರು 30 ದಿನಗಳ ಮಿಲ್ಲಿಂಗ್ ಸಾಮರ್ಥ್ಯ, ಅಕ್ಕಿ ಮತ್ತು ಬತ್ತ ಒಂದೇ ಚಿಲ್ಲರೆ ವಹಿವಾಟುದಾರರು 50 ಕ್ವಿಂಟಲ್, ಒಂದಕ್ಕಿಂತ ಹೆಚ್ಚಿನ ಚಿಲ್ಲರೆ ವಹಿವಾಟು ಕೇಂದ್ರದವರು 150 ಕ್ವಿಂಟಲ್ ಮತ್ತು ಸಗಟು ವಹಿವಾಟುದಾರರು 3 ಸಾವಿರ ಕ್ವಿಂಟಲ್, ಅಕ್ಕಿಗಿರಣಿಗಳು ಅಕ್ಕಿ ಮತ್ತು ಬತ್ತ ಸೇರಿ ಕಳೆದ ಎರಡು ವರ್ಷಗಳಲ್ಲಿನ ಯಾವುದೇ ತಿಂಗಳಲ್ಲಿನ ಗರಿಷ್ಠ ವಹಿವಾಟಿನ ಪ್ರಮಾಣ, ಹೊಸ ಗಿರಣಿಗೆ ಮೊದಲ ವರ್ಷದ ಹಲ್ಲಿಂಗ್ನ ಶೇ.75ರಷ್ಟು ದಾಸ್ತಾನು ಮಿತಿ ಮೀರದಂತೆ ಸೂಚಿಸಲಾಗಿದೆ.
ಮಿತಿಯೊಳಗೆ ಬೇಳೆ ಗಿರಣಿಗಳು ಮತ್ತು ಖಾದ್ಯ ಮಿಲ್ಗಳು 1986ರ ಆದೇಶದಂತೆ ದಾಸ್ತಾನು ಮಿತಿ ಅನುಸರಿಸಬೇಕು. ಮಾಹಿತಿಗಾಗಿ 2012ರ ಆಗಸ್ಟ್ 17, ನವೆಂಬರ್ 8 ಮತ್ತು 2013ರ ಜನವರಿ 28ರ ಸರ್ಕಾರದ ಅಧಿಸೂಚನೆಯನ್ನು ಗಮನಿಸಬಹುದಾಗಿದೆ. ಸಗಟು ಪರವಾನಗಿಯನ್ನು ಜಿಲ್ಲಾಧಿಕಾರಿಗಳಿಂದ ಮತ್ತು ಚಿಲ್ಲರೆ ಪರವಾನಿಗೆಗಳನ್ನು ಆಯಾ ತಾಲೂಕಿನ ತಹಸೀಲ್ದಾರ್ ಅಥವಾ ಶಿವಮೊಗ್ಗ ನಗರದಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಿಂದ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

