ನೋಡಲ್ ಅಧಿಕಾರಿಗಳ ತಂಡ ರಚನೆ
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಿಗೆ ನೋಡಲ್ ಅಧಿಕಾರಿಗಳ ತಂಡ ರಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದ್ದು, ಚುನಾವಣೆ ವೇಳೆ ಕಟ್ಟುನಿಟ್ಟಿನ ಪಾಲನೆಗಾಗಿ ಜಿಲ್ಲೆಯಲ್ಲಿನ ಪ್ರತಿಯೊಂದು ತಾಲೂಕಿಗೂ ನೋಡಲ್ ಅಧಿಕಾರಿಗಳ ತಂಡ ರಚಿಸಿದೆ. ತಂಡ ಪ್ರತಿ ತಾಲೂಕಿನ ಸದಾಚಾರ ಸಂಹಿತೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರತಿದಿನ ಮಾಹಿತಿ ನೀಡಬೇಕು.
ನಿಗಾ ಇಡಲು ತಂಡ: ನೋಡಲ್ ಅಧಿಕಾರಿ, ರಕ್ಷಣಾ ಮುಖ್ಯಸ್ಥರು ಹಾಗೂ ಅಬಕಾರಿ ಇಲಾಖೆಯ ಮೇಲೆ ನಿಗಾ ಇಡಲು ಮೂವರನ್ನು ನೇಮಿಸಲಾಗಿದೆ. ಕ್ರಮವಾಗಿ ಶಿವಮೊಗ್ಗಕ್ಕೆ ನೂತನ ಉಪವಿಭಾಗಾಧಿಕಾರಿ ಕುಸುಮ ಕುಮಾರಿ (9845073568) ನೇತೃತ್ವದ ತಂಡದಲ್ಲಿ ರಕ್ಷಣಾ ಇಲಾಖೆಯಿಂದ ಡಿವೈಎಸ್ಪಿ ರಾಮಾನಾಯ್ಕ್ ಹಾಗೂ ಅಬಕಾರಿ ಉಪ ನಿರೀಕ್ಷಕ ತಿಮ್ಮೇಗೌಡ, ಭದ್ರಾವತಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಿರೀಶ್ (9741880755) ಅವರ ತಂಡದಲ್ಲಿ ಭದ್ರಾವತಿ ಡಿವೈಎಸ್ಪಿ ಶ್ರೀಧರ್, ಅಬಕಾರಿ ಉಪ ನಿರೀಕ್ಷಕ ಎಸ್. ಧರಣಿಕುಮಾರ್, ತೀರ್ಥಹಳ್ಳಿಗೆ ಡಿಡಿಎಲ್ಆರ್ ಜಿ.ಎಸ್. ಗಡದವರ್(9342773427) ತಂಡದಲ್ಲಿ ತೀರ್ಥಹಳ್ಳಿಯ ಸಿಐ ಬಿ.ಎಸ್. ಬಸವರಾಜ್, ಅಬಕಾರಿ ನಿರೀಕ್ಷಕ ಕೆ. ವೆಂಕಟೇಶ್, ಸಾಗರಕ್ಕೆ ಅಲ್ಲಿನ ಎಸಿ ಉದಯಕುಮಾರ್ ಶೆಟ್ಟಿ (9449257596) ತಂಡದಲ್ಲಿ ತೀರ್ಥಹಳ್ಳಿ ಡಿಎಸ್ಪಿ, ಟಿ.ಪಿ. ಶಿವಕುಮಾರ್, ಅಬಕಾರಿ ನಿರೀಕ್ಷಕ ಎಂ.ಸಿ. ಶಂಕರ್ ಅವರನ್ನು ನೇಮಕ ಮಾಡಲಾಗಿದೆ.
ನೀತಿ ಸಂಹಿತೆ ಪಾಲಿಸಲು ಆದೇಶ: ಸೊರಬದ ನೋಡಲ್ ಅಧಿಕಾರಿಯಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ (9611165367), ಸೊರಬದ ವೃತ್ತ ನಿರೀಕ್ಷಕ ಎಫ್.ಎನ್. ಲಿಂಗದಾಳ್, ಅಬಕಾರಿ ನಿರೀಕ್ಷಕಿ ಮಮತಾ, ಶಿಕಾರಿಪುರಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಮೂರ್ತಪ್ಪ(9448100753), ಡಿಎಸ್ಪಿ ಜೆ.ಬಿ. ಮಂಜುನಾಥ್, ಅಬಕಾರಿ ನಿರೀಕ್ಷಕ ಸೈಯದ್ ಫಜಲುಲ್ಲಾ ಷರೀಫ್, ಶಿರಾಳಕೊಪ್ಪಕ್ಕೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಿ. ತಿಪ್ಪೇಸ್ವಾಮಿ (9886379800), ವೃತ್ತ ನಿರೀಕ್ಷಕ ಮಾದಪ್ಪ, ನಾರಾಯಣ ಪವಾರ್ ಮತ್ತು ಹೊಸನಗರಕ್ಕೆ ಈರಣ್ಣ (9448225319), ವೃತ್ತ ನಿರೀಕ್ಷಕ ಗಣಪತಿ ವೈ. ಗುಡಾಜೆ, ಟಿ. ರವಿಶಂಕರ್ ಅವರನ್ನು ನೇಮಕ ಮಾಡಿದ್ದು, ನೀತಿ- ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

