ಶಿವಮೊಗ್ಗ

ಪೀಠದ ಸೂಚನೆಯಂತೆ ಬೆಂಬಲ

Published On :

ಶಿವಮೊಗ್ಗ: ಮುಂದಿನ ಚುನಾವಣೆ ವೇಳೆ ಯಾರನ್ನು ಬೆಂಬಲಿಸಬೇಕು ಎಂದು ಸಮಾಜ ಮುಖಂಡರು ಹಾಗೂ  ಗುರುಪೀಠ ಸೂಚಿಸುತ್ತದೆ ಎಂದು ಬಾಗಲಕೋಟೆಯ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಭೋವಿ ಸಮಾಜಕ್ಕೆ ಕರೆ ನೀಡಿದರು.
ಜಿಲ್ಲಾ ಭೋವಿ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವ ಮತ್ತು ಜಿಲ್ಲಾ ಮಟ್ಟದ  ಭೋವಿ ಸಮಾವೇಶದಲ್ಲಿ ಮಾತನಾಡಿ, ಚುನಾವಣೆಯ ದಿನಗಳು ಹತ್ತಿರ ಬರುತ್ತಿದೆ. ಈ ವೇಳೆ ಸಮಾಜದ ಬಾಂಧವರು ಜಾಗೃತರಾಗಬೇಕು. ಆಗ ಜನಪ್ರತಿನಿಧಿಗಳು ಜಾಗೃತರಾಗಿ ನಮ್ಮನ್ನು ಗೌರವದಿಂದ ನೋಡುತ್ತಾರೆ. ಅರ್ಹರನ್ನು ಪೀಠ ಸಂಘ, ಸಂಸ್ಥೆಗಳು ಗುರುತಿಸುತ್ತವೆ. ಗುರುಪೀಠಗಳ ಆಜ್ಞೆಗಳನ್ನು ಎಲ್ಲರು ಪಾಲಿಸಬೇಕು ಎಂದರು.
ರಾಜ್ಯವನ್ನು ಆಳಿದ ಸಮಾಜದವರೆಂದರೆ ಒಂದು ಲಿಂಗಾಯಿತ, ಮತ್ತೊಂದು ಒಕ್ಕಲಿಗ ಸಮುದಾಯ. ಇವರಿಬ್ಬರು ಅಣ್ಣ- ತಮ್ಮಂದಿರಿದ್ದಂತೆ. ಹೆಚ್ಚು ಪ್ರಭಾವ ಇರುವ, ಒಕ್ಕಲಿಗ, ಲಿಂಗಾಯಿತ ಸಮುದಾಯದವರು  ಮುಖ್ಯಮಂತ್ರಿಗಳಾಗುತ್ತಾರೆ ಎನ್ನುವುದಾದೆ ಅವರ ಒಗ್ಗಟ್ಟನ್ನು ಅರಿಯಬೇಕು. ಕುರುಬ ಸಮಾಜ ನಾನು- ನಾನು  ಎಂದು ಕಳೆದ ಚುನಾವಣೆ ವೇಳೆ ಕೇವಲ 6- 7 ಸೀಟುಗಳು ಪಡೆದುಕೊಂಡಿತ್ತು. ಇನ್ನೂ ಬ್ರಾಹ್ಮಣ ಸಮುದಾಯದ ಜನಪ್ರತಿನಿಧಿಗಳು ಪ್ರತಿ ಸರ್ಕಾರದಲ್ಲಿ 4- 5 ಜನ ಮಂತ್ರಿಗಳು ಆಗುತ್ತಾರೆ. ಏಕೆಂದರೆ ಇದು ಅವರ ಬುದ್ದಿವಂತಿಕೆಗೆ ಸಿಗುವ ಗೌರವ. ಆದ್ದರಿಂದ ಭೋವಿ ಸಮುದಾಯಗಳು ಕೂಡ ಒಗ್ಗಟ್ಟಿನಿಂದ ಸಂಘಟಿತರಾಗಿ ಎಂದರು.  
ಬಲಿಷ್ಟರಾಗಿ: ಬೋವಿ ಸಮಾಜಕ್ಕೆ ಸದಾಶಿವ ಆಯೋಗ ಎನ್ನುವ ಗರ ಬಡಿದಿದೆ. ಈಗ ಹೋಗಬೇಕಾದರೆ ಸಮಾಜದವರು  ಬಲಿಷ್ಟರಾಗಬೇಕು. ಅದಕ್ಕಾಗಿ ಜನಸಾಮಾನ್ಯರು ಶ್ರಮಿಸಬೇಕು. ಆ ಪಕ್ಷ, ಈ ಪಕ್ಷ ಎಂದು ನೋಡಬೇಡಿ . ಎಲ್ಲಾ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿ. ಚುನಾವಣೆಯಲ್ಲಿ ಸೋಲು, ಗೆಲುವಿನ ನಿರ್ಣಾಯಕ ಮತಗಳು ನೀವಾಗಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮೇಶ್ವರರು ಅನ್ನಕ್ಕಾಗಿ ತಮ್ಮ ಜನ್ಮ ಸ್ಥಳವನ್ನು ತೊರೆಯಲಿಲ್ಲ. ಸಮಾಜದ ಏಳಿಗೆಗಾಗಿ ಊರು ತೊರೆದರು. ಹಾಗಾಗಿ ಪ್ರತಿಯೊಬ್ಬ ಸಮಾಜದ ಬಾಂಧವರು ಸ್ವಾರ್ಥ ಹೊರತಾಗಿ ಕೆಲಸ ಮಾಡಿ . ನಿಸ್ವಾರ್ಥ ಸೇವೆಯಿಂದ ನಾಡು, ನುಡಿ, ದೇಶ ಉಳಿಯುತ್ತದೆ. ಅಧಿಕಾರದೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವಣ್ಣಪ್ಪ, ಭೋವಿ ಸಮಾಜ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹನುಮಂತಪ್ಪ, ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.