ಶಿಲಾಮೂರ್ತಿ ವಿತರಣೆ
ಶಿವಮೊಗ್ಗ: ಶ್ರೀ ಶಿರಡಿ ಸಾಯಿದೀಪ ಚಾರಿಟಬಲ್ ಟ್ರಸ್ಟ್ ಶಿರಡಿ ಸಾಯಿ ಭಕ್ತರಿಗಾಗಿ ಫೆ.17ರಂದು ಸಂಜೆ 5 ಗಂಟೆಗೆ ನಗರದ ಎನ್ಇಎಸ್ ಮೈದಾನದಲ್ಲಿ ಶಿರಡಿ ಸಾಯಿಬಾಬ ಅವರ ಅಮೃತಶಿಲಾ ಮೂರ್ತಿಗಳನ್ನು ಸಹಸ್ರಾರು ಭಕ್ತರಿಗೆ ಉಚಿತವಾಗಿ ನೀಡಲಿದೆ. ಸಾಯಿ ಸತೀಶ್ಗುರೂಜಿ ಅವರು ಮೂರ್ತಿಗಳನ್ನು ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ 9 ಮಠಾಧಿಪತಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಜೈನ, ಮುಸ್ಲಿಂ ಗುರುಗಳು ಉಪಸ್ಥಿತರಿರುವರು. ಶಿರಡಿಸಾಯಿ ಅವರ ಅಮೃತಶಿಲೆ ಮೂರ್ತಿ, ಕ್ಯಾಲೆಂಡರ್, ಫೋಟೋ, ಕೈ ಚೈನ್ಗಳನ್ನು ಉಚಿತವಾಗಿ ಪಡೆಯಬಹುದು. ಕಾರ್ಯಕ್ರಮಕ್ಕೆ ಬರಲು ಟೋಕನ್ ಪಡೆಯಬೇಕು ಎಂದು ಟ್ರಸ್ಟ್ ತಿಳಿಸಿದೆ. ವಿವರಗಳಿಗಾಗಿ- 9243114448 ಸಂಪರ್ಕಿಸಿ.
ಪರೀಕ್ಷೆ ಮಾಹಿತಿ
ಶಿವಮೊಗ್ಗ: ಪ್ರಿಯದರ್ಶಿನಿ ಡಿಇಡಿ ಕಾಲೇಜು ಆವರಣದಲ್ಲಿ ಫೆ.16ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನದ ವಿವೇಕ್ ಬ್ಯೂರೋ ಮುಖ್ಯಸ್ಥ ಶಿವಕುಮಾರ್, ಧಾರವಾಡದ ಕ್ಲಾಸಿಕ್ ಖಾನ್ ಪಾಲ್ಗೊಳ್ಳುವರು. ಆಸಕ್ತ ಅಭ್ಯರ್ಥಿಗಳು ಪ್ರಿಯದರ್ಶಿನಿ ಡಿಇಡಿ ಕಾಲೇಜಿನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಕಾರ್ಯದರ್ಶಿ ಎನ್. ರಮೇಶ್ ತಿಳಿಸಿದ್ದಾರೆ.
ಕುಸ್ತಿ ಪಂದ್ಯಾವಳಿ
ಶಿವಮೊಗ್ಗ: ಜಿಲ್ಲಾ ಶಿವಪ್ಪ ನಾಯಕ ಮಟ್ಟಿ ಕುಸ್ತಿ ಅಭಿವೃದ್ಧಿ ಸಂಘ ಫೆ.26 ಮತ್ತು 27ರಂದು ನಗರದ ಸೈನ್ಸ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಏರ್ಪಡಿಸಿದೆ. ಪಂದ್ಯಾವಳಿಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಮೊದಲನೇ ಬಹುಮಾನ ರು. 10 ಸಾವಿರ, ಎರಡನೇ ಬಹುಮಾನ ರು. 5 ಸಾವಿರ, ಮೂರನೇ ಬಹುಮಾನ ರು. 3 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು ಎಂದು ಅಧ್ಯಕ್ಷ ಎಚ್. ಈಶ್ವರಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ- 9739537918.
ಸಮಾಲೋಚನಾ ಸಭೆ
ಶಿವಮೊಗ್ಗ: ನಗರಸಭಾ ಕಾರ್ಯಾಲಯ ಫೆ.12ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಸಾರ್ವಜನಿಕರ ಸಂಘ ಸಂಸ್ಥೆಗಳ ಪೂರ್ವಭಾವಿ ಸಮಾಲೋಚನಾ ಸಭೆ ಏರ್ಪಡಿಸಿದೆ. ನಾಗರಿಕರು, ಸಂಘ, ಸಂಸ್ಥೆ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ನಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

