ಶಿವಮೊಗ್ಗ

ನಾಳೆಯಿಂದ ಜಾನಪದ ನಾಟಕೋತ್ಸವ

Published On :

ಶಿವಮೊಗ್ಗ: ನಾಗಪುರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ 11ರಿಂದ 13ರವರೆಗೆ ಕುವೆಂಪು ರಂಗಮಂದಿರದಲ್ಲಿ ಸಾಂಪ್ರಾದಾಯಿಕ ಜಾನಪದ ನಾಟಕೋತ್ಸವ ಏರ್ಪಡಿಸಿದೆ.
 ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರದ ಪ್ರಮುಖ ಗೋಪಾಲ್ ಬೇತವಾರ್, ನಾಟಕೋತ್ಸವದಲ್ಲಿ  ಕರ್ನಾಟಕ, ಛತ್ತಿಸ್‌ಗಡ, ಆಂಧ್ರ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳ 5 ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದರು.
 ಪ್ರತಿ ರಾಜ್ಯಗಳ ಜಾನಪದ ಕಲೆ ಹಾಗೂ ಸಂಸ್ಕೃತಿಯನ್ನ ಪ್ರೋತ್ಸಾಹಿಸುವ ದೃಷ್ಟಿಯಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿ ನಾಟಕ 2.30ರಿಂದ 3ಗಂಟೆ ಅವಧಿಯದಾಗಿದ್ದು, 20 ರಿಂದ 25 ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ. 11ರಂದು ಸಂಜೆ 6.30ಕ್ಕೆ ಛತ್ತಿಸ್‌ಗಡದ ನವಜ್ಯೋತಿ ಥೇಟರ್ ಅಕಾಡೆಮಿ ತಂಡ (ರಾಮಯಣ, ಮಹಾಭಾರತ ಕಥೆಯುಳ್ಳ ಛಾರಸಿಕ್ಕ ನಾಟಕ), 12ರಂದು ಮಧ್ಯಾಹ್ನ 3.30 ಆಂಧ್ರ ಪ್ರದೇಶದ ಹೈದರಾಬಾದ್‌ನ ಸುರಭಿ ಸಂಗೀತ್ ತಂಡ (ಸಂಗೀತ ಪ್ರಧಾನ), ಸಂಜೆ 6.30ಕ್ಕೆ ಮಹಾರಷ್ಟ್ರದ ಜೈ ಜೈ ಗೌರಿಶಂಕರ ನಾಟಕ, 13ರಂದು ಮಧ್ಯಾಹ್ನ 3.30ಕ್ಕೆ ಮಧ್ಯಪ್ರದೇಶದ ಲೋಕ ನಾಟ್ಯಾ ಸ್ಟಾಂಗ್ ನಾಟಕ, ಸಂಜೆ 6.30ಕ್ಕೆ ಕರ್ನಾಟಕ, ಹನುಮಾನ್ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು. ಗೋಷ್ಠಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕಾಂತೇಶ್ ಕದರಮಂಡಲಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.