ಶಿವಮೊಗ್ಗ

ಅಚ್ಚರಿ ಮೂಡಿಸಿದ ಅಕಾಲಿಕ ಮಳೆ...

Published On :

ಶಿರಾಳಕೊಪ್ಪ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ರಾತ್ರಿ ಅಕಾಲಿಕ ಭಾರಿ ಮಳೆ ಸುರಿಯಿತು.    ಶನಿವಾರ ಸಂಜೆ 6- 45ಕ್ಕೆ ಪ್ರಾರಂಭವಾದ ಮಳೆ ರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಸುರಿಯಿತು. ಮಳೆಯಿಂದ ರೈತರಿಗೆ ಸಹಾಯವಾಗಲಿದೆ.
ರೈತರು ಇತ್ತೀಚೆಗೆ ಬೇಸಿಗೆ ಬೆಳೆಯಾಗಿ ಬತ್ತ, ಮೆಕ್ಕೆಜೋಳ, ಸೂರ್ಯಕಾಂತಿ ಇತರ ಹಲವಾರು ಬೆಳೆಗಳನ್ನು ಬೆಳೆಯಲು ವಿದ್ಯುತ್ ಅಡಚಣೆ ಆಗಿತ್ತು. ಇದರಿಂದ ಕೆಲವು ಬೆಳೆಗಳಿಗೆ ನೀರಿನ ತೊಂದರೆಯಾಗಿತ್ತು.
ಶನಿವಾರ ಬಂದ ಅಕಾಲಿಕ ಮಳೆಯಿಂದ ಪುನಹ ಬೆಳೆಗಳಿಗೆ ಜೀವಬಂದಂತಾಗಿದೆ. ಮುಂದೆ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪ  ಸುಧಾರಣೆ ಆದರೂ ರೈತರು ಕೆಲವು ಮಟ್ಟಿಗೆ ಬೆಳೆಯನ್ನು ಬೆಳೆಯಬಹುದು.   
ತರಕಾರಿ, ತೆಂಗಿನಮರ, ಹೆಸರು, ಉದ್ದಿನ ಬೆಳೆಗಳಿಗೆ ಈ ಮಳೆಯಿಂದ ಅತಿಹೆಚ್ಚು ಅನಕೂಲವಾಗಲಿದೆ. ವಾತಾವರಣ ತಂಪಾಗಿ ಜನರು ಮಳೆಯಿಂದ ಸಂತಸಗೊಂಡಿದ್ದಾರೆ.

ಶಿವಮೊಗ್ಗ: ಚಳಿಗಾಲ ಮುಗಿದು ಬೇಸಿಗೆ ಕಾಲಿಡುವ ಮುನ್ನ ಸುರಿದ ಅಕಾಲ ಮಳೆ ಅಚ್ಚರಿ ಮೂಡಿಸಿದ್ದು, ಹಲವು ಅವಘಡಗಳಿಗೂ ಸಾಕ್ಷಿಯಾಯಿತು.
ಮಧ್ಯಾಹ್ನದಿಂದ ಮೋಡಗಳು ದಟ್ಟೈಸುತ್ತಿದ್ದು, ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಮಳೆ ಸುರಿಯಲಾರಂಬಿಸಿತು. ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು.
ನಗರದ ಬಾಪುಜಿನಗರದ 10ನೇ ತಿರುವಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಕಾರು ಜಖಂಗೊಂಡಿತು. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಯಾವುದೇ ಅನಾಹುತವಾಗಿಲ್ಲ. ಮಳೆಯ ನಡುವೆ ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
ತುಂಗಾ ಹಾಗೂ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಅಕಾಲ ಮಳೆ ಸಂತಸ ತಂದಿದೆ. ಬತ್ತ ನಾಟಿ ಆರಂಭವಾಗಿದ್ದು, ನೀರಿಗಾಗಿ ರೈತರು ಪರಿತಪಿಸುತ್ತಿದ್ದರು. ಮಳೆ ಇನ್ನಷ್ಟು ಹೊತ್ತು ಬರಬಾರದಿತ್ತೆ ಎಂದುಕೊಳ್ಳುವ ಮನಸ್ಥಿತಿ ಅವರದ್ದಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.