ತುಳಜಾ ಭವಾನಿ ಅಮ್ಮನವರ ಗೋಂದಳ
ಸಾಗರ: ಪಟ್ಟಣದ ಕೆಳದಿ ರಸ್ತೆಯಲ್ಲಿರುವ ತುಳಜಾ ಭವಾನಿ ಅಮ್ಮನವರು ಗೋಂದಳ ಮಹಾಪೂಜೆ ಕಾರ್ಯಕ್ರಮ ಫೆ. 12ರಂದು ನಡೆಯಲಿದೆ. ಮಹಾಪೂಜೆ ಅಂಗವಾಗಿ ಬೆಳಗ್ಗೆ 11ಕ್ಕೆ ವಿಷ್ಣು ಸಹಸ್ರನಾಮ, ಮಧ್ಯಾಹ್ನ 4ಕ್ಕೆ ತುಳಜಾ ಭವಾನಿ ಅಮ್ಮನವರ ಕಟ್ಟಡದ ಕಾಮಗಾರಿ ಶಂಕುಸ್ಥಾಪನೆ ನೆರವೇರಲಿದೆ.
ಸಂಸದ ಬಿ.ವೈ. ರಾಘವೇಂದ್ರ ಕಾಮಗಾರಿಗೆ ಚಾಲನೆ ನೀಡಲಿದ್ದು, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಸದಸ್ಯ ಟಿ.ಡಿ. ಮೇಘರಾಜ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ 10ಕ್ಕೆ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಪಿ. ಲಕ್ಷ್ಮಣರಾವ್ ಭರತ್ ಮತ್ತು ಸಂಗಡಿಗರಿಂದ ತುಳಜಾ ಭವಾನಿ ಕಥಾ ಸಂಕಲನವಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಾಹುಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ನಾಗರಾಜ ಲಾಳಂಕೆ ಕೋರಿದ್ದಾರೆ.
ಚಿತ್ರಕಲಾ ಗ್ರೇಡ್ನಲ್ಲಿ ಉತ್ತೀರ್ಣ
ಭದ್ರಾವತಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2012-13ನೇ ಸಾಲಿನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಕಾಗದನಗರದ ಪೇಪರ್ಟೌನ್ ಪ್ರೌಢಶಾಲೆಯ ವಿದ್ಯಾರ್ಥಿಗಳು 2 ಡಿಸ್ಟಿಂಕ್ಷನ್, 11 ಪ್ರಥಮ ದರ್ಜೆ ಮತ್ತು 12 ದ್ವಿತೀಯ ದರ್ಜೆ ಪಡೆದು ಉತ್ತೀರ್ಣರಾಗಿದ್ದಾರೆಂದು ಶಾಲಾ ಪ್ರಕಟಣೆ ತಿಳಿಸಿದೆ. ಶಾಲೆಯ ಚಿತ್ರಕಲಾ ಶಿಕ್ಷಕ ಎಸ್.ಟಿ. ಬಾಲರಾಜ್ ಈ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಿದ್ದಾರೆ.
11ರಂದು ಗೋಡ್ಕಿಂಡಿ ಬಾನ್ಸುರಿ ವಾದನ
ಸಾಗರ: ಥಲಸೇಮಿಯ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಯಲ್ಲಾಪುರ ತಾಲೂಕಿನ ಮೈತ್ರಿ ಭಟ್ ಎಂಬ ಬಾಲಕಿಯ ಚಿಕಿತ್ಸೆಗೆ ಸುಮಾರು ರು. 20 ಲಕ್ಷ ಅಗತ್ಯವಿದ್ದು, ಈಕೆಯ ಸಹಾಯಾರ್ಥ ದಾನಿ ಎ.ಎನ್. ವೆಂಕಟಕೃಷ್ಣ , ನಿಸರ್ಸ ಆತ್ಮಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ತಾಲೂಕು ಕಸಾಪ ಹಾಗೂ ವರದಾಮೂಲದ ಶ್ರೀಕೃಪಾ ಯುವಕ ಮಂಡಳಿ ಫೆ. 11ರಂದು ಸಂಜೆ 6ಕ್ಕೆ ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಪ್ರವೀಣ ಗೋಡ್ಕಿಂಡಿ ಅವರಿಂದ ಬಾನ್ಸುರಿ ವಾದನ ಹಾಗೂ ಯುವ ಪ್ರತಿಭೆ ನವ್ಯಭಟ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಜೊತೆಗೆ ಮೈತ್ರಿ ಭಟ್ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವವರು ವಿಜಯ ಬ್ಯಾಂಕ್ ಯಲ್ಲಾಪುರ ಉಳಿತಾಯ ಖಾತೆ ಸಂ. 122601011000314 ಕ್ಕೆ ಹಣ ಸಂದಾಯ ಮಾಡಬಹುದು ಎಂದು ಸಂಘಟಕರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

