ನೀರು ಪೂರೈಕೆಗೆ ಸಹಾಯವಾಣಿ
ಶಿವಮೊಗ್ಗ: ಪ್ರಸಕ್ತ ಬೇಸಿಗೆಯಲ್ಲಿ ಶಿವಮೊಗ್ಗ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗುರುತಿಸಿ, ಪರ್ಯಾಯ ಕ್ರಮ ಕೈಗೊಳ್ಳಲು ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.
ಸಾರ್ವಜನಿಕರು ಕುಡಿಯುವ ನೀರಿಗೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಸಹಾಯವಾಣಿ ಕೇಂದ್ರದ ದೂ- 08182 279312ಗೆ ಕರೆಮಾಡಿ ಅಥವಾ ಖುದ್ದಾಗಿ ಲಿಖಿತವಾಗಿ ದೂರನ್ನು ದಾಖಲಿಸಿ, ಶೀಘ್ರಗತಿಯ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ಹಾಗೂ ದೂರುದಾರರು ವಿವರವಾದ ವಿಳಾಸ, ಸಂಪರ್ಕ ದೂರವಾಣಿ ಮುಂತಾದ ವಿವರಗಳನ್ನು ನೀಡುವಂತೆ ಶಿವಮೊಗ್ಗದ ತಹಸೀಲ್ದಾರರು ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಗ್ರಾಹಕರಿಗೆ ಸೂಚನೆ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಭಾರತ ಸಂಚಾರ ನಿಗಮದ ಕೇವಲ ಒಳಬರುವ ಕರೆಗಳ ಸೌಲಭ್ಯದ ಸುಲಭ್ ಯೋಜನೆಯಡಿ ಸ್ಥಿರ ದೂರವಾಣಿಯ ಹಾಲಿ ತಿಂಗಳ ಬಾಡಿಗೆಯನ್ನು 99 ರಿಂದ 120ಕ್ಕೆ ಡಿ. 1 ರಿಂದ ಅನ್ವಯವಾಗುವಂತೆ 3ತಿಂಗಳುಗಳ ಅವಧಿಗೆ ಹೆಚ್ಚಿಸಲಾಗಿದೆ. ಗ್ರಾಹಕರು ವಿವರಗಳಿಗಾಗಿ ನಿಗಮದ ಅಂತರ್ಜಾಲ ತಾಣ ಢಿಢಿಢಿ.ಛಿಡಟಿಟ.್ಛ್ಟ.್ಝಟಿ ಅಥವಾ ದೂರವಾಣಿ ಸಂಖ್ಯೆ 08182-261247ನ್ನು ಸಂಪರ್ಕಿಸ ಬಹುದು ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ಪೂರ್ವಭಾವಿ ತರಬೇತಿ
ಶಿವಮೊಗ್ಗ: ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಸವೇಶ್ವರ ಸಹಕಾರಿ ಒಕ್ಕೂಟ ಮತ್ತು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಫೆ.4ರಿಂದ 8ರವರಗೆ ಶಿಕಾರಿಪುರದ ಬಂಜಾರ ಭವನದಲ್ಲಿ ಸೇನಾಭರ್ತಿ ಪೂರ್ವಭಾವಿ ತರಬೇತಿಯ ಶಿಬಿರ ಏರ್ಪಡಿಸಲಾಗಿದೆ. ಫೆ.4ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸೈನಿಕ ಮಂಡಳಿ ಅಧ್ಯಕ್ಷರಾದ ಎಂ.ವಿ. ವೇದಮೂರ್ತಿ ತರಬೇತಿ ಶಿಬಿರ ಉದ್ಘಾಟಿಸುವರು. ಶಿಕಾರಿಪುರದ ತಹಸೀಲ್ದಾರ್ ಕೆ.ಎಚ್. ಶಿವಕುಮಾರ್ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

