ರಾಣಾ ಪ್ರತಾಪ್ ಜಯಂತಿ ಆಚರಣೆ
ಮಸ್ಕಿ: ರಾಣಾ ಪ್ರತಾಪಸಿಂಹ ಅವರ 475ನೇ ಜಯಂತಿಯನ್ನು ಇತ್ತೀಚೆಗೆ ಇಲ್ಲಿನ ಕಣಿವೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಜಯಂತಿ ಅಂಗವಾಗಿ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ರಾಣಾ ಪ್ರತಾಪ್ ಭಾವಚಿತ್ರದ ಮೆರವಣಿಗೆ ಕಣಿವೆ ಆಂಜನೇಯ ದೇವಸ್ಥಾನದವರೆಗೂ ನಡೆಸಲಾಯಿತು. ಮುಖಂಡ ಅಶೋಕ ಠಾಕೂರ್ ಮಾತನಾಡಿ, ಗೋನಾಳ, ಕಣ್ಣೂರು, ಗುಡದೂರು ಹಾಗೂ ಮಸ್ಕಿಯ ರಜಪೂತ ಸಮುದಾಯದವರೆಲ್ಲ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸನ್ಮಾನ: ತುಳಜಾ ಭವಾನಿ ಹಾಗೂ ಕಣಿವೆ ಆಂಜನೇಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಮಲಾಲ್ ಸಿಂಗ್ ದೇಶಮುಖ್ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನರಸಿಂಗ್ ಬಾನು ಗೋನಾಳ, ರಘುವೀರಸಿಂಗ್ ದೇಶಮುಖ್, ಶಿಕ್ಷಕ ರಾಮಸಿಂಗ್, ನಾರಾಯಣ್ ಠಾಕೂರ, ಮಹೇಶ ದೇಶಮುಖ್ ಸೇರಿ ರಜಪೂತ ಮಹಿಳಾ ಸಂಘದ ಮುಖಂಡರಾದ ಚಂದ್ರಕಲಾ ದೇಶಮುಖ್, ಅನಿತಾ ಕಿಲ್ಲಾ ವೇದಿಕೆಯಲ್ಲಿದ್ದರು. ನೂರಾರು ಪುರುಷರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾಧ್ಯಮ ಪ್ರಶಸ್ತಿಗೆ ಮಲ್ಲಿಕಾರ್ಜುನಸ್ವಾಮಿ ಆಯ್ಕೆ
ರಾಯಚೂರು: ಬೆಂಗಳೂರಿನ ಪತ್ರಕರ್ತರ ವೇದಿಕೆಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನೀಡಲಾಗುವ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ನಗರದ ಪತ್ರಿಕಾ ಛಾಯಾಗ್ರಾಹಕ ಮಲ್ಲಿಕಾರ್ಜುನಸ್ವಾಮಿ ಆಯ್ಕೆಯಾಗಿದ್ದಾರೆ. ಜು.1ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ವೇದಿಕೆಯಿಂದ ಆಯೋಜಿಸಿರುವ ಸಮಾರಂಭದಲ್ಲಿ ನಗರದ ಪತ್ರಿಕಾ ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಪತ್ರಿಕಾ ರಂಗದಲ್ಲಿನ ಸೇವೆಗೆ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕಂಪ್ಯೂಟರ್ ತರಬೇತಿ: ಪ್ರಮಾಣ ಪತ್ರ ವಿತರಣೆ
ಸಿಂಧನೂರು: ಇಂದಿನ ಆಧುನಿಕ ಯುಗದಲ್ಲಿ ಬಡತನದ ಬೇಗೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸರ್ಕಾರದಿಂದ ಬರುವಂತಹ ಎಲ್ಲ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಪಂ ಇಒ ಜಿ.ಬಿ. ಹೂಗಾರ ಹೇಳಿದರು. ತಾಲೂಕು ಪಂಚಾಯ್ತಿ ಕಚೇರಿ ಹಾಗೂ ಕಿಯೋನಿಕ್ಸ್ ಸಂಯುಕ್ತಾಶ್ರಯದಲ್ಲಿ ಬಿಆರ್ಜೆಎಫ್ ಯೋಜನೆಯಡಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ನಿಟ್ ಕಂಪ್ಯೂಟರ್ ವ್ಯವಸ್ಥಾಪಕ ಎನ್. ಸತೀಶ, ಉಪನ್ಯಾಸಕ ರಾಜಶೇಖರ ಬಂಗಾರಶೆಟ್ಟರ್, ಶೇಖರ ಯರದಿಹಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

