ಗಣದಿನ್ನಿಗೆ ಡಾಕ್ಟರೇಟ್
ರಾಯಚೂರು: ಉತ್ತರ ಪ್ರದೇಶದ ಮೊನಡ್ ವಿವಿಯು ಇಲ್ಲಿನ ಸೋಮನಾಥ ರೆಡ್ಡಿ ಗಣದಿನ್ನಿ ಅವರಿಗೆ ಡಾಕ್ಟರೇಟ್ ಪದವಿ ಪ್ರಕಟಿಸಿದೆ. ಉತ್ತರ ಪ್ರದೇಶದ ಹ್ಯಾಪುರ್ದಲ್ಲಿನ ಮೊನಡ್ ವಿವಿಯು ಸೋಮನಾಥ ರೆಡ್ಡಿ ಗಣದಿನ್ನಿ ಅವರು ಸಮಾಜ ಕಾರ್ಯ ವಿಭಾಗದಲ್ಲಿ ಮಂಡಿಸಿದ ಸ್ವ-ಉದ್ಯೋಗ ಮಾಡಲು ಮಹಿಳಾ ಸಬಲೀಕರಣದಲ್ಲಿ ಸ್ತ್ರೀಶಕ್ತಿ ಮತ್ತು ಸ್ವ-ಸಹಾಯ ಗುಂಪುಗಳ ಪಾತ್ರ ವಿಷಯದ ಮೇಲಿನ ಮಹಾಪ್ರಬಂಧ ಮನ್ನಿಸಿ ಈ ಡಾಕ್ಟರೇಟ್ ಪದವಿ ಪ್ರಕಟಿಸಿದೆ. ಗುಲ್ಬರ್ಗ ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರೊ. ಡಾ. ನೂಸ್ರತ್ ಫಾತಿಮಾ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಭಾರ ಎಳೆಯುವ ಸ್ಪರ್ಧೆ ನಾಳೆ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿ ಮುಂಗಾರು ಕಾರಹುಣ್ಣಿಮೆ ಅಂಗವಾಗಿ ಜೂ.24ರಂದು ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಗ್ರಾಮದ ಸಂತೆ ಮೈದಾನದಲ್ಲಿ ಅಂದು ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗ್ರಾಮದ ಮುಖಂಡ ತಿಮ್ಮಪ್ಪನಾಯಕ ಪೊಲೀಸ್ ಪಾಟೀಲ್ ತಿಳಿಸಿದ್ದು, ಉದ್ಘಾಟನೆಯನ್ನು ಸಂಸದ ಬಿ.ವಿ. ನಾಯಕ ನೆರವೇರಿಸಲಿದ್ದು, ಸಣ್ಣ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವವರಿಗೆ 10 ಸಾವಿರ, ದ್ವಿತೀಯ ಬಹುಮಾನ 5 ಸಾವಿರ, ತೃತೀಯ ಬಹುಮಾನ 3 ಸಾವಿರ ನೀಡಲಾಗುತ್ತದೆ. ರೈತರು ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

