ರಾಯಚೂರು

ಎಂ.ಎ.ಸಲೀಂ ಪದಗ್ರಹಣ

Published On :

ರಾಯಚೂರು: ರಾಯಚೂರು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರಾಗಿ ಎಂ.ಎ. ಸಲೀಂ ಅಧಿಕಾರ ವಹಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ. ಅವರಿಗೆ ಸಾರ್ವಜನಿಕರು ಅರೆ ಸರ್ಕಾರಿ, ರಹಸ್ಯ, ಪತ್ರಗಳನ್ನು ಎಂ.ಎ. ಸಲಿಂ, ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ. ನಂ 1-11-60 ಬಾರ್ 126 ಬಾರ್ 1 ಬಿಎಸ್‌ಎಲ್‌ವಿ ಲೇಔಟ್, ಲಿಂಗಸ್ಗೂರು ರಸ್ತೆ, ರಾಯಚೂರು ಇಲ್ಲಿಗೆ ತಲುಪಿಸಲು ಕೋರಿದೆ.
ಎನ್‌ಎಸ್‌ಎಸ್‌ನಿಂದ ನಾಯಕತ್ವ ಗುಣ
ರಾಯಚೂರು: ನಗರದ ಸೇಠ್ ರಿಕಬ್ ಚಂದ್ ಪಾರಸಮಲ್ ಸುಖಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜು ಪ್ರಾಚಾರ್ಯ ಪ್ರೊ. ಚಂದ್ರಕಾಂತ್ ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾಭಾವನೆ ಬೆಳೆಸಿಕೊಳ್ಳಲು ಸಲಹೆ ನೀಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಶಾಲಾ ಕಾಲೇಜಿನ ಆವರಣದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಪರಿಸರ ಸ್ವಚ್ಛವಾಗಿಡಲು ಸಲಹೆ ನೀಡಿದರು. ಅತಿಥಿ ಕಾಲೇಜಿನ ಉಪ ಪ್ರಾಚಾರ್ಯ ಡಾ. ವೀರೇಶ ಸಿರೆಗಾರ್, ಎನ್ನೆಸ್ಸೆಸ್ ಅಧಿಕಾರಿ ಡಾ. ಕಾಶಪ್ಪ ಮಾತನಾಡಿದರು. ಈ ವೇಳೆ ಸ್ವಯಂ ಸೇವಕರಿಗೆ ಎನ್‌ಎಸ್‌ಎಸ್ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಇದ್ದರು.




ಸಿಎಂ ಭೇಟಿ ದಿನ ಕೇಂದ್ರ ಸ್ಥಾನದಲ್ಲಿರಲು ಸೂಚನೆ
ರಾಯಚೂರು: ಸಿಎಂ ಸಿದ್ದರಾಮಯ್ಯ ಅವರು ಆ.12 ಮತ್ತು 13ರಂದು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ರಾಯಚೂರು, ಮಾನವಿ ಹಾಗೂ ಸಿಂಧನೂರು ತಾಲೂಕುಗಳಲ್ಲಿ ಆ.12 ಮತ್ತು 13ರಂದು ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಅಗತ್ಯ ಮಾಹಿತಿ ಕ್ರೋಢೀಕರಿಸಿ ನೀಡಬೇಕಿರುವ ಹಿನ್ನೆಲೆ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಯಾವುದೇ ಕಾರಣಕ್ಕೂ ರಜೆ ಪಡೆಯುವಂತಿಲ್ಲ ಎಂದು ಸೂಚಿಸಿದ್ದಾರೆ. ಆ.13ರಂದು ಬೆಳಗ್ಗೆ 11ಕ್ಕೆ ಸಿಎಂ ನಗರದ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದು, ಜಿಲ್ಲಾಡಳಿತದಿಂದ ಕೋರುವ ಮಾಹಿತಿ ತಕ್ಷಣ ಒದಗಿಸಲು ಎಲ್ಲರೂ ಸಿದ್ದರಿರುವಂತೆ ಪ್ರಭಾರಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಆದೇಶಿಸಿದ್ದಾರೆ.



ಲೇಖಕರಿಗೆ ಗುಲ್ಬರ್ಗ ವಿವಿ ಪ್ರಶಸ್ತಿ
ರಾಯಚೂರು: ಗುಲ್ಬರ್ಗ ವಿವಿಯು ರಾಯಚೂರು, ಯಾದಗಿರಿ, ಗುಲ್ಬರ್ಗ, ಬೀದರ್ ಜಿಲ್ಲೆಗಳ ಲೇಖಕರಿಂದ ಪುಸ್ತಕಗಳನ್ನು ಪ್ರಶಸ್ತಿಗೆ ಆಹ್ವಾನಿಸಿದೆ. ಕನ್ನಡ ಜನಪದ, ಸಾಹಿತ್ಯ ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ತೆಲುಗು ಮತ್ತು ಅನುವಾದ ಸಾಹಿತ್ಯ ಕುರಿತು ಒಂದೊಂದು ಪುಸ್ತಕ ಲೇಖಕರಿಗೆ ತಲಾ 5 ಸಾವಿರ ಬಹುಮಾನವಾಗಿ ವಿತರಿಸಲಾಗುವುದು. ಪುಸ್ತಕ ಕಳಿಸುವ ಲೇಖಕರು ಐದು ವರ್ಷದಿಂದ ಈ ಜಿಲ್ಲೆಗಳಲ್ಲಿ ವಾಸವಿರಬೇಕು. ಪುಸ್ತಕ ಕನಿಷ್ಠ 100 ಪುಟ ವಿರಬೇಕು. ಕವನ ಸಂಕಲನ ಕನಿಷ್ಠ 70 ಪುಟಗಳಿರಬೇಕು. ಪಿಎಚ್.ಡಿ ಪ್ರಬಂಧ, ಬೇರೆ ಬೇರೆ ಲೇಖಕರ ಲೇಖನಗಳನ್ನು ಸಂಪಾದನಾ ಸಂಗ್ರಹಗಳನ್ನು ಪರಿಗಣಿಸುವುದಿಲ್ಲ. ಗೌರವಧನ ಅಪೇಕ್ಷಿಸುವವರು ಪುಸ್ತಕದ 4 ಪ್ರತಿಗಳನ್ನು ಆ.20ರೊಳಗೆ ನಿರ್ದೇಶಕರು, ಪ್ರಸಾರಾಂಗ, ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ- ಈ ವಿಳಾಸಕ್ಕೆ ರಿಜಿಸ್ಟ್ರರ್ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಹೆಚ್ಚಿನ ಮಾಹಿತಿಯನ್ನು ಪ್ರಸಾರಾಂಗ ನಿರ್ದೇಶಕರ ಕಚೇರಿಯಿಂದ ಪಡೆಯಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.