ಕಾಯಂ ಪೀಠ ಸ್ಥಾಪನೆಗೆ ಒತ್ತಾಯ
ಸಿಂಧನೂರು: ಸಿಂಧನೂರಿನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದ ಕಾಯಂ ಪೀಠ ಸ್ಥಾಪನೆಗೆ ಒತ್ತಾಯಿಸಿ ತಾ. ನ್ಯಾಯವಾದಿಗಳ ಸಂಘದ ನಿಯೋಗವು ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್ ಮಸ್ಕಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕಾಯಂ ಪೀಠ ಸ್ಥಾಪನೆಗಾಗಿ ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಸಿಂಧನೂರು ನ್ಯಾಯಾಲಯದಲ್ಲಿ 900ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಬಾಕಿ ಉಳಿದ ಪ್ರಕರಣಗಳು ತ್ವರಿತಗತಿ ವಿಲೇವಾರಿಗೆ ಕಾಯಂಪೀಠ ಅವಶ್ಯಕತೆಯಿದೆ ಮುಖ್ಯಮಂತ್ರಿಗಳಿಗೆ ಅಧ್ಯಕ್ಷ ಕೆ. ಭೀಮನಗೌಡ ಮನವರಿಕೆ ಮಾಡಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ಕಾಯಂ ಪೀಠ ಸ್ಥಾಪನೆಗೆ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಕಾಳಿಂಗಪ್ಪ, ಜಿಎಸ್ಆರ್ಕೆ ರೆಡ್ಡಿ, ಬಿ. ಅಬ್ದುಲ್ ಗನಿ, ಹನುಮಂತಪ್ಪ ಗುಡಿ, ಎಂ.ಅಮರೇಗೌಡ, ಕೆ. ಅಮರೇಗೌಡ, ಕೆ. ವೀರನಗೌಡ, ರಾಮಣ್ಣ ನಾಯಕ, ನಾಗರಾಜ ಎಸ್.ಪಿ, ಖಾಜಿ ಮಲ್ಲಿಕ್, ಕಾರ್ಯದರ್ಶಿ ಹನುಮೇಶ, ಕೆ. ಸುನೀಲ್ ಶೆಟ್ಟಿ, ರಾಯಪ್ಪ ಸೇರಿ 20ಕ್ಕೂ ಹೆಚ್ಚಿನ ನ್ಯಾಯವಾದಿಗಳು ನಿಯೋಗದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

