ರಾಯಚೂರು

ಮದ್ಯದ ಅಂಗಡಿ ಸ್ಥಳಾಂತರಕ್ಕೆ ಆಗ್ರಹ

Published On :

ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿ ಬಸ್ ನಿಲ್ದಾಣದ ಬಳಿಯಿರುವ ಮದ್ಯದ ಅಂಗಡಿ ಸ್ಥಳಾಂತರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಅರಕೇರಾ ಗ್ರಾಮ ಘಟಕ ಒತ್ತಾಯಿಸಿದೆ.
ಈ ಕುರಿತು ಇತ್ತೀಚೆಗೆ ಅರಕೇರಾ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ಅರಕೇರಾ ಗ್ರಾಮದ ಸಾರ್ವಜನಿಕರಿಗೆ ಹಾಗೂ ಬೇರೆಡೆಯಿಂದ ಗ್ರಾಮಕ್ಕೆ ಆಗಮಿಸುವ ಗ್ರಾಮಸ್ಥರಿಗೆ ಬಸ್ ನಿಲ್ದಾಣದ ಬಳಿಯಿರುವ ಮದ್ಯದ ಅಂಗಡಿಯಿಂದ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕೆ ಲಕ್ಷಾಂತರ ರು. ವೆಚ್ಚದ ಬಸ್ ನಿಲ್ದಾಣ ನಿರ್ಮಿಸಿದ್ದು, ನಿಲ್ದಾಣವು ಮದ್ಯದ ಅಂಗಡಿಯ ಕಾರಣಕ್ಕೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಿಲ್ದಾಣ ಮುಂದೆ ಮದ್ಯದ ಅಂಗಡಿಯಿರುವುದರಿಂದ ಮಹಿಳೆಯರು ನಿಲ್ದಾಣದ ಬಳಿ ಬಾರದಂಥ ಸ್ಥಿತಿಯಿದೆ ಎಂದು ದೂರಿದ್ದಾರೆ. ಆದ್ದರಿಂದ ಮದ್ಯದ ಅಂಗಡಿಯನ್ನು ಮುಂದಿನ 15 ದಿನದಲ್ಲಿ ಸ್ಥಳಾಂತರಿಸದಿದ್ದರೆ ಗ್ರಾಪಂ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಸಂಘಟನೆಯ ಎಂ.ಎಸ್. ವೆಂಕಟೇಶ, ಬಸವರಾಜ ಗೋಪಾಳಪುರ, ಮಲ್ಲಿಕಾರ್ಜುನ ಪತ್ತಾರ, ಸಂಗಮೇಶ, ನಂದಪ್ಪ, ಜಗನ್ನಾಥ ನಾಯಕ, ಭೀಮನಗೌಡ, ಶರಣಬಸವ, ಗಂಗಣ್ಣ, ಗೂಳಪ್ಪ, ವೀರೇಶ ನಾಯಕ, ವಿಶ್ವನಾಥ ಬಂಡೆಗುಡ್ಡ, ಬಸವರಾಜ ಮಲ್ಲೇದೇವರಗುಡ್ಡ, ಬಾಲಪ್ಪ ಚಂದ್ರಪ್ಪ, ಶಿವರಾಜ, ಬಸವರಾಜ, ಮುದುಕಪ್ಪ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.