ಸೌಹಾರ್ದ ಜೀವನದಿಂದ ಸಾಮಾಜಿಕ ಶಾಂತಿ
ಸಿಂಧನೂರು: ಸೌಹಾರ್ದಯುತ ಜೀವನದಿಂದ ಸಾಮಾಜಿಕ ಶಾಂತಿ ದೊರಕುತ್ತದೆ. ಮನಸ್ಸು ಮಲೀನವಾಗದಂತೆ ತಡೆಯಲು ಸದಾ ಇಂತಹ ಸಂಸ್ಕಾರದ ಸಭೆಗಳಲ್ಲಿ ಭಾಗವಹಿಸಬೇಕು ಎಂದು ಸ್ಥಳೀಯ ಬಸವ ಕೇಂದ್ರದ ಹಿರಿಯ ಅನುಭಾವಿ ವೀರೇಶಪ್ಪ ಸಿರಗುಂಪಿ ಹೇಳಿದರು.
ನಗರದ ಕನಕ ಸಂಸ್ಕಾರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನಕಾರಾಧನೆ-34ನೇ ಧಾರ್ಮಿಕ ಕಾರ್ಯಕ್ರಮ, ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಶರಣೇಗೌಡರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಬಟ್ಟೆ ಕೊಳೆಯಾದರೆ ಮಡಿವಾಳರಿಗೆ ಕೊಟ್ಟು ಸ್ವಚ್ಛಗೊಳಿಸಬಹುದು, ಮಂಡೆ ಮಾಸಿದರೆ ಸ್ವಚ್ಛಗೊಳಿಸಿಕೊಳ್ಳಬಹುದು. ಆದರೆ ಮನಸ್ಸು ಮಾಸಿದರೆ ಶಿವಶರಣರ ಅನುಭಾವದ ನುಡಿಗಳನ್ನು ಹಂಚಿಕೊಂಡು ಅದರಂತೆ ಜೀವನ ಸಾಗಿಸಿದರೆ ಒಳಿತಾಗುವುದು ಎಂದು ತಿಳಿಸಿದರು.
ಭಕ್ತ ಕನಕದಾಸರ 'ನಿನ್ನಂತೆ ಎಲ್ಲರ ನೋಡು..' ಎನ್ನುವ ಸಾಲಿನ ಮಹತ್ವ ತಿಳಿಸಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ಎಲ್ಲರಿಗೂ ದೊರೆಯಬೇಕಾದರೆ ಪರಸ್ಪರರು ಸೌಹಾರ್ದತೆಯಿಂದ ಜೀವನ ಸಾಗಿಸಬೇಕಾದರೆ ನಮ್ಮಂತೆ ಎಲ್ಲರನ್ನು ಕಾಣಬೇಕೆಂದು ಕರೆ ನೀಡಿದರು.
ಉತ್ತಮ ಕಾರ್ಯನಿರ್ವಹಿಸುವೆ: ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಶರಣೇಗೌಡ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ನಗರ ಸೌಂದರ್ಯಕ್ಕೆ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಸಮಾಜ ಸೇವಕ ಅಜಿತ್ ಓಸ್ತವಾಲ್ ಮಾತನಾಡಿ, ಕನಕ ಸಂಸ್ಕಾರ ಬಳಗದ ಕನಕಾರಾಧನೆ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದರು. ನಂಜುಂಡಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಮುಖಂಡ ಶ್ಯಾಮಣ್ಣ ಎಸ್ಎಎಸ್ ಉದ್ಘಾಟಿಸಿದರು. ಹಿರಿಯ ಮುಖಂಡ ರಮೇಶಪ್ಪ ಸಾಹುಕಾರ ದಿದ್ದಗಿ ಅಧ್ಯಕ್ಷತೆ ವಹಿಸಿದ್ದರು.
ತಿಮ್ಮಪ್ಪ ಹಾಗೂ ಶಿಕ್ಷಕ ಕೆ.ಬಾಳಪ್ಪ ಪ್ರಾರ್ಥಿಸಿದರು. ನಾರಾಯಣಪ್ಪ ಮಾಡಶಿರವಾರ ತತ್ವಪದಗಾಯನ ಮಾಡಿದರು. ವರ್ತೂರು ಪ್ರಕಾಶ ಸೇನೆಯ ತಾಲೂಕಾಧ್ಯಕ್ಷ ಬಿ.ಹನುಮೇಶ ಸ್ವಾಗತಿಸಿದರು. ಕನಕ ಸಂಸ್ಕಾರ ಬಳಗದ ಸಂಚಾಲಕ ಬಸವರಾಜ ಗೋಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹನುಮಂತಪ್ಪ ಬೇರ್ಗಿ ಕಾರ್ಯಕ್ರಮ ನಿರೂಪಿಸಿದರು. ಕವಿ ಪಂಪಯ್ಯಸ್ವಾಮಿ ಸಾಲಿಮಠ ವಂದಿಸಿದರು.
ಹಿರಿಯ ಪೂಜಾರಿ ಹೊಸಗೇರಪ್ಪ, ಕನಕ ಗುರುಪೀಠದ ತಾಲೂಕಾಧ್ಯಕ್ಷ ಟಿ.ಹನುಮಂತಪ್ಪ, ಕಟ್ಟೆಪ್ಪ ಗುಂಜಳ್ಳಿ, ಬಿ.ಸುಬ್ರಮಣ್ಯ ಉಪಸ್ಥಿತರಿದ್ದರು. ಕೊರಮ ಸಮಾಜದ ಹಿರಿಯ ಸಂಗಪ್ಪ ಜಾಧವ್, ಯುವ ಮುಖಂಡರಾದ ಆರ್.ಸಿ.ಪಾಟೀಲ್, ಎಸ್.ಬಿ. ತಿಮ್ಮಣ್ಣ ವಾಲೇಕಾರ, ವೆಂಕಟೇಶ ಬಾದರ್ಲಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

