ತಾ. ಅಭಿವೃದ್ಧಿಗೆ ಆದ್ಯತೆ: ಸಂಸದ
ದೇವದುರ್ಗ: ತಾಲೂಕಿನ ಸಮಗ್ರ ಅಭಿವೃದ್ಧಿ ಮೂಲಕ ಮಾದರಿ ತಾಲೂಕಾಗಿಸುವುದು ತಮ್ಮ ಗುರಿಯಾಗಿದೆ ಎಂದು ಸಂಸದ ಬಿ.ವಿ. ನಾಯಕ ಹೇಳಿದರು.
ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಇತ್ತೀಚೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ವಿಶೇಷ ಘಟಕ ಗಿರಿಜನ ಯೋಜನೆ ಅಡಿ 40 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿಗೆ ಹರಿಜನ -ಗಿರಿಜನ ಉಪಯೋಜನೆ ಅಡಿ 30 ಕೋಟಿ ಅನುದಾನ ದೊರೆತಿದ್ದು, ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
10 ಕೋಟಿಯನ್ನು ಸಾಮಾಜಿಕ ವಲಯ, ಶೈಕ್ಷಣಿಕ ವಲಯ, ಗ್ರಾಮೀಣ ಆರೋಗ್ಯ ವಲಯಕ್ಕಾಗಿ ಬಳಸಲಾಗುವುದು. 2 ಕೋಟಿಯನ್ನು ಜಾಲಹಳ್ಳಿ, ಅರಕೇರಾ, ಗಬ್ಬೂರು ಹಾಗೂ ದೇವದುರ್ಗ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಲಕರಣೆಗಳ ಖರೀದಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕರಡಿಗುಡ್ಡ ಗ್ರಾಪಂ ಅಧ್ಯಕ್ಷೆ ಚಂದಮ್ಮ, ಜಿಪಂ ಮಾಜಿ ಸದಸ್ಯ ಎಚ್.ಪಿ. ಬಸವರಾಜ, ಗ್ರಾಪಂ ಮಾಜಿ ಅಧ್ಯಕ್ಷ ರಾಮನಗೌಡ ಕರಡಿಗುಡ್ಡ, ಪಕ್ಷದ ಹಿರಿಯ ಮುಖಂಡರಾದ ಹುಸೇನಸಾಬ್ ನೀಲವಂಜಿ, ಪಕ್ಷದ ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ರವಿ ಪಾಟೀಲ್, ಅಮರೇಗೌಡ ಹಂಚಿನಾಳ, ವೇಣುಗೋಪಾಲ ವಕೀಲರು, ರಂಗಣ್ಣ ಕೊಲ್ಕಾರ, ವಾಸುದೇವ ನಾಯಕ, ಎನ್ ಆರ್ಬಿಸಿ ಎಇಇ ಅಶೋಕ, ಜಿಪಂ ಎಇಇ ವೆಂಕಟೇಶ ಗಲಗ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

