ರಾಯಚೂರು

ನಾನು ಯಾರ ಕೈಗೊಂಬೆಯಲ್ಲ

Published On :

ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಜೆಡಿಎಸ್ ಸದಸ್ಯರು ಒಗ್ಗಟ್ಟಾಗಿದ್ದೇವೆ. ಅವಿಶ್ವಾಸದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಬ್ಬರ ಪ್ರತಿಷ್ಠೆಗೆ ಈ ರೀತಿಯ ಗೊಂದಲವುಂಟಾಗಿದೆ. ಪಕ್ಷದ ಎಲ್ಲ ಸದಸ್ಯರು ನನ್ನ ಪರವಾಗಿದ್ದಾರೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾತನಾಡಿ, ಜು.31ರಂದು ಕಾಂಗ್ರೆಸ್ 7 ಸದಸ್ಯರನ್ನು  ಒಳಗೊಂಡಂತೆ ನಾಮನಿರ್ದೇಶಿತ ಮೂವರು, ಜೆಡಿಎಸ್ ಸದಸ್ಯರು ಸೇರಿ ಒಟ್ಟು 13 ಜನರು ಸಭೆಯಿಂದ ಹೊರಗುಳಿದು ಅವಿಶ್ವಾಸದ ಕುರಿತು ಹೇಳಿಕೆ ನೀಡಿದ್ದರು. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಯಾವ ಸದಸ್ಯರಿಗೂ ತಾರತಮ್ಯ ಮಾಡಿಲ್ಲ.
ಸರ್ಕಾರದ ಅನುದಾನವಾಗಲಿ, ಪಪಂ ಅನುದಾನವಾಗಲಿ ಎಲ್ಲ ವಾರ್ಡುಗಳ ಸದಸ್ಯರಿಗೂ ಪಕ್ಷಾತೀತವಾಗಿ ಅಭಿವೃದ್ಧಿಗೆ ಕೊಡಲಾಗಿದೆ. ಇನ್ನು ಎನ್‌ಎ ಕಡತಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಪಪಂಗೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ನಂತರ ತಿಂಗಳೊಳಗಾಗಿ ಪರವಾನಗಿ ಕೊಡಬೇಕು. ಇಲ್ಲವೇ ಜಿಲ್ಲಾಧಿಕಾರಿಗಳೇ ನೇರವಾಗಿ ಪರವಾನಗಿ ನೀಡಬೇಕಿದ್ದು, ಅನಿವಾರ್ಯ ಕಾರಣದಿಂದ ಮಂಜೂರಾತಿಗೆ ಕಳಿಸಲಾಗಿದೆ ಎಂದು ತಿಳಿಸಿದರು.
ನಾನು ಯಾರ ಕೈಗೊಂಬೆಯಲ್ಲ: ನಾನು ಸದಸ್ಯ ವೀರೇಶ ವಡ್ಡರ್ ಅವರ ಕೈಗೊಂಬೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರ. ಆದರೆ ನಾವು 15ಕ್ಕೂ ಅಧಿಕ ವರ್ಷಗಳಿಂದ ವ್ಯವಹಾರಿಕವಾಗಿ ಸ್ನೇಹಿತರಾಗಿದ್ದೇವೆ. ಈಗ ಪಪಂಯಲ್ಲಿ ಇಬ್ಬರೂ ಸದಸ್ಯರಾಗಿದ್ದರಿಂದ ನಾನೀಗ ಅದ್ಯಕ್ಷನಾಗಿದ್ದೇನೆ. ಅದೇ ರೀತಿಯ ಒಡನಾಟವಿದೆ. ಆದರೆ ನಾನು ಅವರ ಕೈಗೊಂಬೆಯಲ್ಲ. ನಾನೂ ಕೂಡ ವಿದ್ಯಾವಂತನಿದ್ದೇನೆಂದು ಸ್ಪಷ್ಟೀಕರಿಸಿದರು.
ಪಟ್ಟಣದ ಅಭಿವೃದ್ಧಿಗೋಸ್ಕರ ನಾನು ಯಾವ ರೀತಿಯಿಂದಲೂ ಸದಸ್ಯರಿಗೆ ಮೋಸ ಮಾಡಿಲ್ಲ. ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದ್ದೇನೆ. ಗುರುವಾರದ ವಿದ್ಯಮಾನದ ಕುರಿತು ಅಸಮಾಧಾನಿತ ಕುರಿತು ಹೇಳಿಕೆ ನೀಡಿದ ಸದಸ್ಯರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ಅವರಲ್ಲಿನ ಗೊಂದಲ ತಿಳಿದಿದ್ದು, ನಾವು ಕೆಲವರ ಒತ್ತಡಕ್ಕೆ ಮಣಿದು ಆ ಸಭೆಯಲ್ಲಿ ಭಾಗವಹಿಸಿದ್ದೇವೆಂದು ತಿಳಿಸಿದ್ದಾರೆಂದರು.
ನನ್ನಿಂದ ಯಾರಿಗೂ ಅನ್ಯಾಯವಾಗಿಲ್ಲ: ಸೋಲಾರ್ ದೀಪಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿರುವುದಕ್ಕೆ ನಾನು ಪ್ರತಿ ವಾರ್ಡುಗಳಲ್ಲಿ ಅವುಗಳನ್ನು ಜೋಡಣೆ ಮಾಡಿಸಲಾಗಿದೆ. ಶಾಸಕರ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ. ಆದರೂ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗಿ ಚರ್ಚಿಸುವೆ. ನನ್ನಿಂದ ಯಾರಿಗೂ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ಸಮಯದಲ್ಲಿ ಸದಸ್ಯ ವೀರೇಶ ವಡ್ಡರ್ ಮಾತನಾಡಿ, ಕೆಲವು ಸದಸ್ಯರಿಗೆ ಸಮಸ್ಯೆ ಉಂಟಾದ ಸಮಯದಲ್ಲಿ ನಾನೇ ಹೇಳಿ ಸಮಸ್ಯೆ ಬಗೆಹರಿಸಿರುವೆ. ಆ ಸಮಯದಲ್ಲಿ ನಾನು ಅಧಿಕಾರ ದುರುಪಯೋಗ, ಸರ್ವಾಧಿಕಾರ ಮಾಡಲಿಲ್ಲ. ಈಗ ಏಕೇ ಮಾಡುತ್ತೇನೆಂದು ಹೇಳುತ್ತಾರೆ ಎನ್ನುವದು ವಿಚಿತ್ರ ಎಂದರು. ಈ ಸಮಯದಲ್ಲಿ ಪಪಂ ಸದಸ್ಯರಾದ ಅಬ್ದುಲ್ ರವೂಫ್, ಬಂದೇನವಾಜ್, ಖಾಜಾಪಾಷಾ ಗಾಡಿವಾನ, ಮುಖಂಡರಾದ ಚಂದಾವಲಿಸಾಬ, ಚಂದ್ರಶೇಖರ ಕಿಲ್ಲೆದಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.