ರಾಯಚೂರು

ಫೆ.1ಕ್ಕೆ ಜೆಡಿಎಸ್ ಸಮಾವೇಶ

Published On :

ರಾಯಚೂರು: ಜಿಲ್ಲಾ ಜಾತ್ಯತೀತ ಜನತಾ ದಳದ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶವನ್ನು ನಗರದಲ್ಲಿ ಫೆ. 1ರಂದು ಆಯೋಜಿಸಲಾಗಿದೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಪಂಪಾಪತಿ, ನಗರದ ಎಪಿಎಂಸಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಚಿಕ್ಕಮಾದು, ಬಂಡೆಪ್ಪ ಖಾಶೆಂಪುರ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಈ ವೇಳೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಯುಸೂಫ್ ಖಾನ್, ಪ್ರಮುಖರಾದ ಶಿವಶಂಕರ್, ರಾಮಕೃಷ್ಣ, ಅರುಣಕುಮಾರ್ ಇದ್ದರು.
ಬಸ್ ನಿಲುಗಡೆಗೆ ಒತ್ತಾಯ
ಸಿಂಧನೂರು: ತಾಲೂಕಿನ ಅರಳಹಳ್ಳಿ, ವಿರುಪಾಪುರ ಗ್ರಾಮಗಳಿಗೆ ಬಸ್ ಕೊರತೆಯಿದ್ದು ಯಾವುದೇ ರೀತಿಯ ಕುಷ್ಟಗಿ ಡಿಪೋ ಬಸ್‌ಗಳು ಹಾಗೂ ಸಿಂಧನೂರಿನ ಡಿಪೋದ ಕೆಲವು ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಬೆಳಗ್ಗೆ ಶಾಲಾ- ಕಾಲೇಜುಗಳಿಗೆ ಹೋಗಲು ತೀವ್ರ ತೊಂದರೆಯಾಗಿದ್ದು ಇದನ್ನು ಖಂಡಿಸಿ ಮಂಗಳವಾರ ಅನೇಕ ವಿದ್ಯಾರ್ಥಿಗಳು ಕೆಲವು ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಬಸ್ ಕೋರಿಕೆಗಾಗಿ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು. ಶಿವಪುತ್ರಪ್ಪ, ಗುರುಸ್ವಾಮಿ, ಮಲ್ಲಿಕಾರ್ಜುನ, ಮಂಜುನಾಥ ಹೊಗರನಾಳ, ಬಸವರಾಜ ಹಟ್ಟಿ, ಮಂಜುನಾಥ ಹಿರೇಮಠ, ಹುಸೇನಪ್ಪ ಅರಳಹಳ್ಳಿ, ಯಲ್ಲಪ್ಪ ಮಗಡೆಮನಿ, ವಿರುಪಾಕ್ಷಪ್ಪ ಪಗಡದಿನ್ನಿ, ವೆಂಕನಗೌಡ ಕಾಟಗಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.