ರಾಯಚೂರು

ಅಗ್ನಿ ಆಕಸ್ಮಿಕ; ಅಪಾರ ಹಾನಿ

Published On :

ಸಿಂಧನೂರು: ನಗರದ ಸುಕಾಲಪೇಟೆಯ ಕನಕದಾಸ ಕಾಲೇಜು ಬಳಿ ಸೋಮವಾರ ಮೂವರ ಗುಡಿಸಲು ಹಾಗೂ ಬಣವೆಗಳಿಗೆ ಆಕಸ್ಮಿಕ ಬೆಂಕಿ ಹತ್ತಿ ಸುಮಾರು 1.55 ಲಕ್ಷ ಮೌಲ್ಯದ ಕಾಳು ಕಡಿ, ಹುಲ್ಲಿನ ಬಣವೆಗಳು ಸುಟ್ಟಿವೆ ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ರವಿಕುಮಾರ ಚವಾಣ ತಿಳಿಸಿದ್ದಾರೆ.
ಮರಿಯಪ್ಪ ಎಂಬುವವರಿಗೆ ಸೇರಿದ ಗುಡಿಸಲು, ದನದ ಕೊಟ್ಟಿಗೆ ಸೇರಿದಂತೆ 10 ಎಕರೆ ಭತ್ತದ ಹುಲ್ಲು, ನಾಲ್ಕು ಎಕರೆ ಸೊಪ್ಪು, 15 ಚೀಲ ಜೋಳ, 4 ಕ್ವಿಂಟಲ್ ಅಕ್ಕಿ, 7 ಕೋಳಿ ಸುಟ್ಟು ಕರಕಲಾಗಿವೆ. ಹಾಗೆಯೇ ಹನುಮಂತ ಎಂಬುವವರಿಗೆ ಸೇರಿದ 5ಎಕರೆ ಭತ್ತದ ಹುಲ್ಲು, ಕರಿಯಪ್ಪ ಎಂಬುವವರಿಗೆ ಸೇರಿದ 3ಎಕರೆ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದೆ. ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲವೆಂದು ಚವ್ಹಾಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.