ಸಾರ್ವಭೌಮತೆ ನಮ್ಮೆಲ್ಲರ ಉಸಿರಾಗಲಿ
ಶಹಾಪುರ: ವೀರಯೋಧರ ತ್ಯಾಗ ಬಲಿದಾನದಿಂದ ದೇಶ ಸ್ವತಂತ್ರ್ಯವಾಗಿದೆ. ದೇಶ ಭಕ್ತರ ಬಗ್ಗೆ ಮತ್ತು ದೇಶದ ಸಾರ್ವಭೌಮತೆಯ ರಕ್ಷಣೆ ನಮ್ಮೆಲ್ಲರ ಉಸಿರಾಗಬೇಕು ಎಂದು ತಹಸೀಲ್ದಾರ ಎಂ.ರಾಚಪ್ಪ ಹೇಳಿದರು.
ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 64ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಗಣರಾಜ್ಯೋತ್ಸವ ಕೇವಲ ಉತ್ಸವ ಆಚರಿಸುವ ದಿನವಲ್ಲ, ಇದೊಂದು ಶೌರ್ಯ ಪ್ರದರ್ಶನದ ದಿನವಾಗಿದೆ. ನಮ್ಮ ದೇಶದ ನೆಲ, ಜಲ, ಸೈನಿಕ ಶಕ್ತಿಯ ಕ್ಷಮತೆಯಿಂದ ದೇಶ ವಿಶ್ವದಲ್ಲಿ ಪ್ರಬಲರಾಗಿ ಕಂಗೊಳಿಸುತ್ತದೆ. ಯುವಶಕ್ತಿ ಜಾಗೃತರಾಗಿ ಸರ್ಕಾರಗಳ ಆಶಯಗಳನ್ನು ಪೂರ್ಣಗೊಳಿಸುತ್ತ ನಮ್ಮಹಿರಿಯರು ತೋರಿದ ಮಾರ್ಗದಲ್ಲಿ ಮುನ್ನಡೆಯಬೇಕು. ದೇಶಕ್ಕಾಗಿ ಸಮರ್ಪಣಾಭಾವ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕವಾಯತು ಪ್ರದರ್ಶನಗಳು, ರಾಷ್ಟ್ರೀಯ ಮತದಾರರ ಜಾಗೃತಿ ಕುರಿತು ನಾಟಕ ಪ್ರದರ್ಶಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

