ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ
ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಗುಮಗೇರಿ ಮಹಾಂತಗೌಡರು ಧ್ವಜಾರೋಹಣ ನೆರವೇರಿಸಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ದೇಶದ ಉತ್ತಮ ಪ್ರಜೆಗಳಾಗಿ ಕೀರ್ತಿ ತರಲು ಹಾರೈಸಿದರು.
ಈ ವೇಳೆ ಸಮಾಜದ ಗೌರವಾಧ್ಯಕ್ಷ ಡಾ.ಎಸ್.ಬಿ. ಅಮರಖೇಡ, ಪ್ರಮುಖರಾದ ಕೆ.ಅಮರೇಗೌಡ, ಬಸವರಾಜ ಸಕ್ರಿ, ಷಣ್ಮುಖಪ್ಪ ವೆಂಕಟಾಪುರ, ಸಿ.ಬಿ.ಪಾಟೀಲ್ ವಕೀಲರು, ಇಂದುವಾಸಿ ಬಸವರಾಜಪ್ಪ, ವಿಶ್ವನಾಥಪ್ಪ ಕ್ಯಾದಿಗೇರಿ, ಅಯ್ಯನಗೌಡ ವಕೀಲರು ಸೇರಿದಂತೆ ಅನೇಕರಿದ್ದರು.
ಕೆಜೆಪಿ: ನಗರದ ಕರ್ನಾಟಕ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಶನಿವಾರ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣವನ್ನು ಜಿಲ್ಲಾ ಸಂಚಾಲಕ ಶಂಕರಗೌಡ ಹರವಿ ನೆರವೇರಿಸಿದರು. ಈ ಸಂದರ್ಭ ಕೆ.ಎಂ.ರಂಗನಾಥ ರೆಡ್ಡಿ, ಅಮೀನುದ್ದೀನ್, ಪವನ್ ಕೆ.ಪಾಟೀಲ್, ಶಶಿರಾಜ್ ಮಸ್ಕಿ, ಶ್ರೀನಿವಾಸ ಪತಂಗೆ, ಜಯತೀರ್ಥದಾಸ್, ಶಿವಕುಮಾರ್ ಸೇರಿದಂತೆ ಅನೇಕರಿದ್ದರು.
ವಕ್ಪ್ ಮಂಡಳಿ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಮಂಡಳಿಯ ಕಚೇರಿಯಲ್ಲಿ ಅಧ್ಯಕ್ಷ ಮೊಹಮ್ಮದ್ ಅನ್ವರ್ ಖಾನ್ ಸಾಬ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕೈಸರ್ ರಜಾಕ್ ಸಾಬ್, ಸೈಯದ್ ಜಾವೀದ್ ಉಲ್ ಹಕ್, ಸೈಯೀದ್ ಸಾಬ್, ನಸೀರುದ್ದೀನ್ ಘಾಜಿ ಸಾಬ್, ಶಕೀಲ್ ಅಹ್ಮದ್ ಮತ್ತು ಸಲೀಂ ಸಾಬ್ ಉಪಸ್ಥಿತರಿದ್ದರು.
ಜನಹಿತ ಕಾಲೇಜು: ನಗರದ ಜನಹಿತ ಕಾನೂನು ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಸಂದರ್ಭ ಕಾಲೇಜಿನ ಆಡಳಿತ ಮಂಡಳಿಯ ಮುಖಂಡ ರಮೇಶ್ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಭೀಮಸೇನ ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಸೂರ್ಯಪ್ರಕಾಶ್, ಜೆ.ಎಂ.ವೀರೇಶ್ ಕುಮಾರ್, ಸಂಗಪ್ಪ ಗಣೇಕಲ್, ರಮೇಶ್ ರೆಡ್ಡಿ, ಬಸವೇಶ್ ಕೋರಿ, ನಾಗವೇಣಿ, ಸಿದ್ದಮ್ಮ ಸೇರಿದಂತೆ ಅನೇಕರಿದ್ದರು.
ರಾಜ್ಯ ಯುವ ಸಂಘ: ನಗರದ ರಾಜ್ಯ ಯುವ ಸಂಘ ಕರ್ನಾಟಕ ಸಂಘಟನೆಯ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಂಜುನಾಥ ಬಾವಿ, ಶಿವಮೂರ್ತಿ, ಅಜಯಕುಮಾರ್, ರಾಜಾಚಂದ್ರ, ದೇವಿಸಿಂಗ್ ಠಾಕೂರ್, ಶಂಕರ್ ರೆಡ್ಡಿ ಸೇರಿದಂತೆ ಅನೇಕರಿದ್ದರು.
ಎಸ್ಕೆಇ ಕಾಲೇಜು: ನಗರದ ಸುವರ್ಣ ಕರ್ನಾಟಕ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಎಸ್ಕೆಇ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕ ಜೆ.ಎಲ್.ಈರಣ್ಣ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯರಾದ ಪ್ರೇಮಾ ದೇಸಾಯಿ, ಶ್ರವಣಕುಮಾರ್ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ಪಿಯುಸಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಲಘು ವಾಹನ ಚಾಲಕರ ಸಂಘ: ನಗರದ ಜಿಲ್ಲಾ ಲಘು ಮೋಟಾರ್ ವಾಹನ ಚಾಲಕರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಎಂ.ಡಿ.ಹನೀಫ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಮುಖರು ಪಾಲ್ಗೊಂಡಿದ್ದರು.
ಗ್ರಾಪಂ ಮರ್ಚಟ್ಹಾಳ್: ತಾಲೂಕಿನ ಮರ್ಚಟ್ಹಾಳ್ ಗ್ರಾಂಪನಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಗೋವಿಂದಮ್ಮ ಗಾರಲದಿನ್ನಿ ಧ್ವಜಾರೋಹಣ ನೆರಲೇರಿಸಿದರು. ಪಿಡಿಒ ದತ್ತುಕುಮಾರ್, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ವೈ.ವೆಂಕಟೇಶ್, ನಾಗಮ್ಮ, ಚಂದ್ರಕಲಾ, ಪ್ರಭುರಾಜ್ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಪಂ ದೇವಸೂಗೂರು: ತಾಲೂಕಿನ ದೇವಸೂಗೂರು ಗ್ರಾಮದ ಗ್ರಾಪಂನಲ್ಲಿ ಶನಿವಾರ ಗಣರಾಜ್ಯೋತ್ಸವ ಆಚರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಅಂಬುಜಾ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷೆ ಐನಾವತಿ ಮಾನ್ವಿ, ಸದಸ್ಯರಾದ ಸೂಗಪ್ಪ ಮಕ್ತಲ್, ಜೆ.ಈರಪ್ಪ, ಶಶಿಕಲಾ ಭೀಮರಾಯ, ಮಾಜಿ ಉಪಾಧ್ಯಕ್ಷ ಮಲ್ಲಪ್ಪ ಸೇರಿದಂತೆ ಅನೇಕರಿದ್ದರು.
ಆರ್ಎಪಿಎಂಸಿ: ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಪತಂಗೆ ಜಯವಂತರಾವ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಎಂ.ವಿಜಯಚಕ್ರವರ್ತಿ, ನಿರ್ದೇಶಕ ಚೆನ್ನಪ್ಪ, ವ್ಯವಸ್ಥಾಪಕ ಬಸವರಾಜ ಪಾಟೀಲ್, ಗಣೇಶಪ್ಪ, ಜಯಪ್ರಕಾಶ್ ರೆಡ್ಡಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
ವೀರಶೈವ ವಿವಿಧೋದ್ದೇಶ ನಿಯಮಿತ: ನಗರದ ವೀರಶೈವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಮಲ್ಲಣ್ಣ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕರಾದ ಬಸವಲಿಂಗಪ್ಪ, ಶಂಬಣ್ಣ ಪಾಟೀಲ್, ಬಿ.ಎಸ್.ಸುರಗಿಮಠ, ಶಿವಪ್ಪ ಪಲ್ಲೇದ್, ಶಂಕರಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ನಗರಸಭೆ: ಇಲ್ಲಿನ ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ್ ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಗರದಮೂರು ಪ್ರಮುಖ ರಸ್ತೆಗಳ ಅಗಲೀಕರಣ ಕೈಗೊಳ್ಳಲಾಗಿದೆ. ರಾಂಪುರ ಜಲಾಶಯದ ಕೆಳಭಾಗದಲ್ಲಿರುವ ಪ್ರದೇಶದ ನಿವಾಸಿಗಳಿಗೆ ಕೃಷ್ಣಾ ನದಿಯಿಂದ ನೀರೊದಗಿಸಲು ಕೊಳವೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಐತಿಹಾಸಿಕ ಮೆಕ್ಕಾ ದರವಾಜಾ ಅಭಿವೃದ್ಧಿಗೆ ಜಿಲ್ಲಾಡಳಿತದ ಜತೆಗೆ ಕೈಗೂಡಿಸಿರುವ ನಗರಸಭೆಯು 35 ಲಕ್ಷಗಳನ್ನು ಕೋಟೆಯಲ್ಲಿ ಸೋಲಾರ್ ದೀಪ ಅಳವಡಿಕೆಗೆ ಒದಗಿಸಿದೆ. ಲಿಂಗಸ್ಗೂರು ರಸ್ತೆಗೆ ಪರ್ಯಾಯ ಮಾರ್ಗಕ್ಕಾಗಿ 50 ಲಕ್ಷ ವೆಚ್ಚ ಮಾಡಲಾಗಿದೆ ಎಂದರು.
ನಗರಸಭೆ ಸದಸ್ಯರಾದ ಶಿವಮೂರ್ತಿ, ದರೂರು ಬಸವರಾಜ್, ಶ್ರೀನಿವಾಸರೆಡ್ಡಿ, ಆಯುಕ್ತೆ ಮಂಜುಶ್ರೀ, ಶಾಸಕ ಸೈಯದ್ ಯಾಸೀನ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

