ಯವಕರು ದೇಶದ ಆಸ್ತಿ: ಗೌಸುದ್ದೀನ್
ಸುರಪುರ: ಯುವಕರು ದೇಶದ ಸಂಪತ್ತು. ದೇಶದ ಭವಿಷ್ಯ ಅವರ ತೋಳ್ಬಲದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಯುವಕರು ಪ್ರಜಾಸತ್ತಾತ್ಮಕ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಭವ್ಯ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆಂದು ತಹಸೀಲ್ದಾರ್ ಮಹ್ಮದ ಗೌಸುದ್ದೀನ್ ಕರೆ ನೀಡಿದರು.
ಇಲ್ಲಿನ ಪ್ರಭು ಕಾಲೇಜು ಮೈದಾನದಲ್ಲಿ ಶನಿವಾರ ತಾಲೂಕು ಆಡಳಿತ ಏರ್ಪಡಿಸಿದ್ದ 64ನೇ ಗಣರಾಜ್ಯೋತ್ಸದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ಮಾತನಾಡಿದರು. ಶಂಬನಗೌಡ ಕೊಡೆಕಲ್, ತಾಪಂ ಅಧ್ಯಕ್ಷೆ ಸಾಬಮ್ಮ ಗೋಪಣ್ಣ ದೇಸಾಯಿ, ಪರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ, ಉಪಾಧ್ಯಕ್ಷ ರತ್ನಮ್ಮ ಎಲಿಗಾರ, ಎಪಿಎಂಸಿ ಅಧ್ಯಕ್ಷ ಬಸ್ಸಣ್ಣ ಬಂಗ್ಗಿ, ಪುರಸಭೆ ಸದಸ್ಯರಾದ ಸಿದ್ರಾಮಪಾಟೀಲ, ಲಿಯಾಖತ್ ಖಟಪಟ್, ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ, ಪಿಐ ರಾಜಕುಮಾರ ವಾಜಂತ್ರಿ, ಪಿಎಸ್ಐ ಹನುಮಂತಪ್ಪ ಪಟ್ಟೇದಾರ, ಸಿಡಿಪಿಒ ಥಾಮಸ್ ದೊಡಮನಿ, ಸಮಾಜ ಕಲ್ಯಾಣಾಧಿಕಾರಿ ದೇನುಸಿಂಗ ಚವ್ಹಾಣ ಇತರರು ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

