ರಾಯಚೂರು

ಮುದಗಲ್ನಲ್ಲಿ ಸಡಗರ

Published On :

ಮುದಗಲ್: ಪಟ್ಟಣದ ವಿವಿಧಡೆ 64 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಪಂಪಯ್ಯ ಮಠ ನೇರವೇರಿಸಿದರು.  ಕಾರ್ಯಕ್ರಮದಲ್ಲಿ ಹುಸೇನಸಾಬ, ರಾಮಣ್ಣ ಹಿರೇಮನಿ, ಆಶೋಕಗೌಡ ಪಾಟೀಲ್, ಅಮೀರಬೇಗ್ ಉಸ್ತಾದ, ಪೌಲರಾಜ, ಮುದಿವೀರಪ್ಪ ಜೀಡಿ, ಬಾಷುಮಿಯಾ, ಕರಿಯಪ್ಪ,   ಎಸ್.ಆರ್. ರಸೂಲ್, ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಸದಸ್ಯ ಪದ್ಮಾವತಿ ಯಾದವ್, ನೀಲಮ್ಮ ಗದ್ದಿ, ಎಂ.ಡಿ. ರಫಿ, ಗುಂಡಪ್ಪ ಜೀಡಿ ಭಾಗವಹಿಸಿದ್ದರು. ಪಿಎಸ್ಐ ಬಸವರಾಜ, ಸಿಬ್ಬಂದಿ ಧ್ವಜವಂದನೆ ಸಲ್ಲಿಸಿದರು.
ಧ್ವಜಾರೋಹಣ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ರಾಜೇಂದ್ರ ಮನಗೂಳಿ, ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಬಸವರಾಜ, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಅಧ್ಯಕ್ಷ ಶರಣಗೌಡ ಬಯ್ಯಾಪೂರ, ಉರ್ದು ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್. ರಸೂಲ್, ಮದರ್ ತೆರೆಸಾ ಶಾಲೆಯಲ್ಲಿ ಸಾದಿಕ್ ಅಲಿ ಧ್ವಜಾರೋಹಣ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.