ರಾಯಚೂರು

ಶಾಂತಿಪಾಲನಾ ಸಭೆ (ಸುದ್ದಿ ಸಂಕ್ಷೇಪ)

Published On :

ಮುದಗಲ್: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದಂಗವಾಗಿ ಶಾಂತಿಪಾಲನಾ ಸಭೆಯನ್ನು ನಡೆಸಲಾಯಿತು.
ಶಾಂತಿಪಾಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಿಎಸ್ಐ ಬಸವರಾಜ ಬಿಸನಕೊಪ್ಪ ಮಾತನಾಡಿ, ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪಟ್ಟಣವು ಹೆಸರುವಾಸಿ. ಜೊತೆಗೆ ದೇಶವು ಹಲವಾರು ಜಾತಿ ಜನಾಂಗವು ವಾಸಿಸುವ ಮೂಲಕ ದೇಶ ಕೂಡ ಭಾವೈಕ್ಯತೆಗೆ ಮಾದರಿ. ಪಟ್ಟಣದಲ್ಲಿ ಸರ್ವ ಜನಾಂಗದ ನಾಗರಿಕರು ಹಬ್ಬದಾಚರಣೆಗೆ ಒಂದಾಗಿ ಭಾವ್ಯಕತೆಯಗೆ ಹೆಚ್ಚಿನ ಅಡಿಪಾಯ ಹಾಕಬೇಕೆಂದು ಮನವಿ ಮಾಡಿಕೊಂಡರು.
ಸೈ. ಯಾಸೀನ್ ಖ್ರಾದಿ, ಹುಸೇನಿ ಆಲ್ಮ ಕಮಿಟಿ ಅಧ್ಯಕ್ಷ ಶೇಖಹುಸೇನ್ ಕ್ಷರೀಫ್, ಮೌಲಾನಾ ಮಹಿಬೂಬಲಿ, ಮೋಬಿನ್ಸಾಬ, ಗುರುಬಸಪ್ಪ ಸಜ್ಜನ ಮಾತನಾಡಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷ ಹುಸೇನಸಾಬ, ಸದಸ್ಯರಾದ ಅಶೋಕಗೌಡ ಪಾಟೀಲ, ಅಮೀರಬೇಗ್ ಉಸ್ತಾದ, ಮುಖಂಡರಾದ ಮುನ್ವರಖಾನ್, ಗುಂಡಪ್ಪ ಜೀಡಿ, ಸೈಯ್ಯದ್ಸಾಬ, ರಜ್ಜಬ ಬೆಳ್ಳಿಕಟ್, ವೆಂಕಟೇಶ ಹಿರೇಮನಿ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ರಾಘವೇಂದ್ರ ಕುದುರಿ, ಶರಣಪ್ಪ ದೇಸಾಯಿ, ಮಹ್ಮದ ರಫೀ, ವೀರಣ್ಣ ದಫೇದಾರ, ಮಲ್ಲಪ್ಪ ಹೂಗಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಗ್ರಾಪಂ ಸಭೆ ಮುಂದೂಡಿಕೆ

ದೇವದುರ್ಗ: ತಾಲೂಕಿನ ಜೇರಬಂಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.  ಗ್ರಾಪಂ ಸಾಮಾನ್ಯ ಸಭೆಯನ್ನು ಜ.23ರಂದು ಕರೆಯಲಾಗಿತ್ತು. ಆದರೆ ಸದಸ್ಯರ ಹಾಜರಾತಿ ಕೊರತೆಯಿಂದ ಈ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಫೆ.13ರಂದು ಬಿಎಸ್ಸಾರ್ ಕಾಂಗ್ರೆಸ್ ಬೃಹತ್ ಸಮಾವೇಶ
ಲಿಂಗಸ್ಗೂರು: ರಾಯಚೂರು ನಗರದ ಹತ್ತಿರ ಏಳುಮೈಲ್ ಕ್ರಾಸ್ ಬಳಿ ಬಿಎಸ್ಸಾರ್ ಕಾಂಗ್ರೆಸ್ನಿಂದ ಫೆ. 13ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ಲಿಂಗಸ್ಗೂರು ಕ್ಷೇತ್ರದ ಬಿಂಬಿತ ಆಕಾಂಕ್ಷಿ ಸಿದ್ದು ಬಂಡಿ ತಿಳಿಸಿದರು. ಸ್ಥಳೀಯ ಪಕ್ಷದ ಕಾರ್ಯಾಲಯದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಅವರ ಅಭಿವೃದ್ಧಿ ಪರ ಚಿಂತನೆ ಹಾಗೂ ಪಕ್ಷದ ಸಿದ್ಧಾಂತ ಮೆಚ್ಚಿ ಗುರುವಾರ ಮಾವಿನಬಾವಿ, ದೇವರಭೂಪುರ, ಕೋಠಾ, ಗೌಡೂರು ತಾಂಡಾ, ಬೆಂಚಲದೊಡ್ಡಿ ತಾಂಡಾ ಸೇರಿದಂತೆ ಸುಮಾರು 150 ಜನರು ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಸಂಚಾಲಕರಾದ ಹನುಮಂತಪ್ಪ ಕಂದಗಲ್, ಜಿ.ಜಿ. ನಾಯಕ, ಮುಖಂಡರಾದ ಅಮರೇಶ ಮಡ್ಡಿ, ಶಶಿಧರ ಬಿಜ್ಜೂರ, ಸಣ್ಣ ಸಿದ್ದಯ್ಯ, ಡಾ. ಮುರ್ತೂಜಾ, ಮುಸ್ತಫಾ ಹಟ್ಟಿ ಸೇರಿದಂತೆ ಇದ್ದರು. ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಸಿದ್ಧುಬಂಡಿ ಅವರ ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಜೆಡಿಎಸ್ ನೇಕಾರ ವಿಭಾಗದ ಸಭೆ
ರಾಯಚೂರು: ನಗರದಲ್ಲಿ ಈಚೆಗೆ ಜಿಲ್ಲಾ ಜಾತ್ಯತೀತ ಜನತಾ ದಳದ ನೇಕಾರ ವಿಭಾಗದ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ನೇಕಾರ ವಿಭಾಗದ ಅಧ್ಯಕ್ಷ ಆಲಂಬಾಬು ಮಟಮಾರಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.