ನಾಡಗೌಡರಿಗೆ ಟಾಂಗ್
ಸಿಂಧನೂರು: ಸ್ಥಳೀಯ ನಗರಸಭೆ ಚುನಾವಣೆ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಎಲ್ಲ ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಶುರುವಾಗಿದೆ. ಹೊಸ ಅಭ್ಯರ್ಥಿಗಳು ಹೊಸ ಪಕ್ಷಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದರೆ, ಹಳಬರು ಯಾವ ಪಕ್ಷಕ್ಕೆ ಹೋದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ನಗರದ ಬ್ರಾಹ್ಮಣರ ಓಣಿಯಲ್ಲಿನ ವಾರ್ಡ್ 3ರಿಂದ ಆಯ್ಕೆಯಾಗಿದ್ದ ಜೆಡಿಎಸ್ನ ಸದಸ್ಯ ಕೆ.ಗೋವಿಂದರಾವ ಈ ಬಾರಿ ನಾಡಗೌಡರಿಗೆ ಟಾಂಗ್ ನೀಡಿ ಕೆಜೆಪಿ ಅಭ್ಯರ್ಥಿಯಾಗುವ ಸೂಚನೆಗಳಿವೆ. ಕಳೆದ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿಲ್ಲವೆಂದು ಬೇಸತ್ತಿದ್ದ ಅವರು ಜೆಡಿಎಸ್ ಸೇರಿದ್ದರು. 5 ವರ್ಷಗಳ ಬಳಿಕ ಆ ಪಕ್ಷವನ್ನೂ ತ್ಯಜಿಸಿ ಕೆಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬಿಎಸ್ಸಾರ್ ಕಾಂಗ್ರೆಸ್ನಿಂದ ನರಸಿಂಹಾಚಾರ್ಯ ಪುನಃ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ನಿಂದ ವೆಂಕಟರಾವ್ ಬಂಡಿ ವಕೀಲರು ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಏತನ್ಮಧ್ಯೆ ಬಿಎಸ್ಸಾರ್ನಿಂದ ಗುಂಡುರಾವ ಚನ್ನಳ್ಳಿ ಅವರನ್ನು ನಿಲ್ಲಿಸಬೇಕೆಂದು ಪಕ್ಷದ ಮುಖಂಡ ಕರಿಯಪ್ಪ ತಮ್ಮ ಆಪ್ತರೊಂದಿಗೆ ಮಾತನಾಡಿದ್ದಾರೆಂದು ಹೇಳಲಾಗಿದೆ.
ಬಿಜೆಪಿಯಿಂದ ರಂಗನಾಥಾಚಾರ್ಯ ಸಾಲಗುಂದಾ ಸ್ಪರ್ಧಿಸಲು ಉತ್ಸಾಹ ಹೊಂದಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಜೆಡಿಎಸ್ ಕೆ.ಜಿಲಾನಿಪಾಷಾ ವಕೀಲರ ಮಗ ಎಸ್.ಕೆ. ಖಾದ್ರಿ (ಅಲಿಪಾಷಾ) ಅವರನ್ನು ಸ್ಪರ್ಧೆಗಿಳಿಸಲು ಅಲೋಚಿಸುತ್ತಿದ್ದಾರೆ.
ವಿಪ್ರರ ಮತ ಅಧಿಕ: ಸುಮಾರು 2600ಕ್ಕೂ ಹೆಚ್ಚು ಮತಗಳಿರುವ ಈ ವಾರ್ಡ್ನಲ್ಲಿ ಸುಮಾರು 1400ಕ್ಕೂ ಹೆಚ್ಚು ವಿಪ್ರ ಸಮುದಾಯ ಸೇರಿದಂತೆ ಇತರ ವರ್ಗದ ಮತಗಳಿವೆ. 1200ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಮತಗಳಿವೆ. ನಾಲ್ವರು ವಿಪ್ರ ಸಮಾಜದ ಅಭ್ಯರ್ಥಿಗಳು ಅಖಾಡಕ್ಕಿಳಿದರೆ ಅಲ್ಪಸಂಖ್ಯಾತರ ಅಭ್ಯರ್ಥಿ ಸುಲಭವಾಗಿ ವಿಜೇತರಾಗುತ್ತಾರೆ ಎಂಬುದು ಜೆಡಿಎಸ್ನ ಲೆಕ್ಕಾಚಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

