ರಾಯಚೂರು

ಪಡಿತರ ಪಟ್ಟಿ ಪ್ರಕಟ

Published On :

ರಾಯಚೂರು: ಜಿಲ್ಲಾದ್ಯಂತದ ವಿವಿಧ ತಾಲೂಕುಗಳಲ್ಲಿರುವ ಚೀಟಿಗಳ ಅಂಗೀಕೃತ, ರದ್ದುಪಡಿಸಿದ ಪಡಿತರ ಚೀಟಿಗಳ ಪಟ್ಟಿ  ಪ್ರಕಟಿಸಿದ್ದು, ಸಾರ್ವಜನಿಕರು ಗಮನಿಸಲು ಕೋರಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು, ಜಿಲ್ಲೆಯ ರಾಯಚೂರು, ಮಾನವಿ, ದೇವದುರ್ಗ, ಸಿಂಧನೂರು ಹಾಗು ಲಿಂಗಸ್ಗೂರು ತಾಲೂಕುಗಳ ಒಟ್ಟು 126 ನ್ಯಾಯಬೆಲೆ ಅಂಗಡಿಗಳಲ್ಲಿರುವ ಅಂತ್ಯೋದಯ, ಬಿಪಿಎಲ್, ಎಪಿಲ್, ಅನಿಲ, ಅನಿಲ ರಹಿತ ಪಡಿತರ ಚೀಟಿಗಳ ಅಂಗೀಕೃತ, ರದ್ದುಪಡಿಸಿದ ಪಡಿತರ ಚೀಟಿಗಳ ವಿವರಗಳನ್ನು ಆಯಾ ಗ್ರಾಪಂ, ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.

ಸೇಂದಿ ಮಾರಾಟ
ರಾಯಚೂರು: ಇಲ್ಲಿನ ಮೈಲಾರ ನಗರದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ತಿಮ್ಮಪ್ಪ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂದೆ ಅನಧಿಕೃತವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ  ಪೊಲೀಸರು ಬಂಧಿಸಿ, ಅವನಿಂದ 10 ಲೀಟರ್ ಸೇಂದಿ, ನಗದು 55 ಜಪ್ತಿ ಮಾಡಲಾಗಿದೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.