ಬಹಿರಂಗ ವಿಚಾರಣೆ
ರಾಯಚೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಫೆ.13 ಮತ್ತು 14 ರಂದು ಬೆಂಗಳೂರಿನಲ್ಲಿ ದೂರುಗಳ ಬಹಿರಂಗ ವಿಚಾರಣೆ ಸಭೆ ನಡೆಸಲಿದೆ.ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ ಅವರು, ಫೆ.13ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ವಸಂತ ನಗರದ ದೇವರಾಜು ಅರಸು ಭವನದ ಆಡಿಟೋರಿಯಂ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾದಲ್ಲಿ ವಿವಿಧ ಹಿಂದುಳಿದ ವರ್ಗಗಳ ಜಾತಿ ಜನಾಂಗದವರ ದೂರಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿವಿಧ ಜಾತಿಗಳು ಸಲ್ಲಿಸಿದ ಮನವಿಗಳ ಬಗ್ಗೆ ಪರ ಅಥವಾ ವಿರೋಧ ಅಭಿಪ್ರಾಯ ಹೊಂದಿರುವ ಸಂಘ, ಸಂಸ್ಥೆಗಳು, ವ್ಯಕ್ತಿಗಳು, ಖುದ್ದಾಗಿ ಅಥವಾ ಅಧಿಕೃತವಾಗಿ ಸಂಘ, ಸಂಸ್ಥೆಗಳಿಂದ ನೇಮಕಗೊಂಡ ನ್ಯಾಯವಾದಿಗಳು ಹಾಜರಾಗಿ ತಮ್ಮ ಅಭಿಪ್ರಾಯ, ಅಹವಾಲುಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯೋಗದ ಮುಂದೆ ಮಂಡಿಸುವಂತೆ ಕೋರಲಾಗಿದೆ.
ಸೀರೆ ವಿತರಣೆ
ಸಿಂಧನೂರು: ನಗರದ ಆದರ್ಶ ಕಾಲೋನಿಯ ಕೆಪಿಸಿಸಿ ಸದಸ್ಯ ಎನ್.ಶಿವನಾಗಪ್ಪ ತಾಯಿಯ 10ನೇ ವರ್ಷದ ಪುಣ್ಯ ತಿಥಿ ಅಂಗವಾಗಿ ಸೋಮವಾರ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು. ನಂತರ ಅಕ್ಕಮಹಾದೇವಿ ಶಿವನಾಗಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಅತ್ತೆಯ ಸವಿನೆನಪಿಗಾಗಿ ಬಡ ಮಹಿಳೆಯರಿಗೆ 200ಕ್ಕೂ ಹೆಚ್ಚೂ ಸೀರೆ ವಿತರಿಸಲಾಗಿದೆ ಎಂದರು. ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಚಾರ್ಯರು, ವಿಜಯಕುಮಾರ ವಕೀಲರು, ಪುರಸಭೆ ಮಾಜಿ ಸದಸ್ಯ ಎನ್.ಅಮರೇಶ, ಉಪನ್ಯಾಸಕ ಮಂಜುನಾಥ ಮತ್ತಿತರರು ಇದ್ದರು.
ವಾರ್ಷಿಕೋತ್ಸವ
ಮಸ್ಕಿ: ಪಟ್ಟಣದಲ್ಲಿ ಸೋಮವಾರ ಶರಣಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 6ನೇ ವಾರ್ಷಿಕೋತ್ಸವ ಸೋಮವಾರ ಆಯೋಜಿಸಲಾಗಿತ್ತು. ಸಮಾರಂಭವನ್ನು ಕೇಕ್ ಕತ್ತರಿಸಿ ಚಾಲನೆ ನೀಡಿದ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ, ಸಹಕಾರಿ ಸಂಘದ ಯಶಸ್ಸಿನಲ್ಲಿ ಎಲ್ಲರ ಸಹಕಾರ ಅಡಗಿದೆ ಎಂದರು. ಪ್ರಾರಂಭದಲ್ಲಿ 306 ಜನರಿದ್ದ ಶೇರುದಾರರ ಸಂಖ್ಯೆಯೀಗ 1425ಕ್ಕೇರಿದೆ. ರು. 38ಲಕ್ಷ ಶೇರು ಬಂಡವಾಳ ಹೊಂದಿದೆ. ಸಹಕಾರ ಬ್ಯಾಂಕಿನಲ್ಲಿ ರು. 6,53,47, 434 ಠೇವಣಿಯಿದ್ದು, ರು. 6,70,45,739 ಸಾಲ ನೀಡಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಸಹಕಾರಿ ನಿಯಮಿತವು ರು. 18.50 ಲಕ್ಷ ರು. ಲಾಭ ಗಳಿಸಿದೆ. ಸಾಲ ವಸೂಲಾತಿಯಲ್ಲಿ ಶೇ. 98ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂ ದರು. ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಶಾಂತಕುಮಾರ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದಿನ ವ್ಯವಸ್ಥಾಪಕ ಆನಂದ, ಭ್ರಮರಾಂಬಾ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

