ತಾಲೂಕು ಪುನಾರಚನೆ: ಪಾದಯಾತ್ರೆ
ಲಿಂಗಸ್ಗೂರು: ತಾಲೂಕಿನ ಕುಪ್ಪಿಗುಡ್ಡ, ಸರ್ಜಾಪುರ ಮತ್ತು ಅಮರಾವತಿ ಗ್ರಾಮಗಳನ್ನು ನೂತನ ಮಸ್ಕಿ ತಾಲೂಕಿಗೆ ಸೇರ್ಪಡೆ ಮಾಡದೆ ಲಿಂಗಸ್ಗೂರು ತಾಲೂಕಿನಲ್ಲಿಯೇ ಯಥಾವತ್ತಾಗಿ ಉಳಿಸಬೇಕೆಂದು ಆಗ್ರಹಿಸಿ ಆಯಾ ಗ್ರಾಮಸ್ಥರು ಸೋಮವಾರ ಸರ್ಜಾಪುರ ಗ್ರಾಮದಿಂದ ಲಿಂಗಸ್ಗೂರು ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ 43 ನೂತನ ತಾಲೂಕುಗಳಲ್ಲಿ ಮಸ್ಕಿ ತಾಲೂಕು ಕೇಂದ್ರವನ್ನಾಗಿಸಲು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಕುಪ್ಪಿಗುಡ್ಡ, ಸರ್ಜಾಪುರ ಮತ್ತು ಅಮರಾವತಿ ಗ್ರಾಮಗಳನ್ನು ನೂತನ ಮಸ್ಕಿ ತಾಲೂಕು ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕವಾಗಿದೆ. ಸದರಿ ಗ್ರಾಮಗಳು ಲಿಂಗಸ್ಗೂರು- ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದು, ಲಿಂಗಸ್ಗೂರು ಪಟ್ಟಣದಿಂದ ಕುಪ್ಪಿಗುಡ್ಡ 6 ಕಿಮೀ, ಸರ್ಜಾಪುರ 7 ಕಿಮೀ ಮತ್ತು ಅಮರಾವತಿ 12 ಕಿಮೀ ಅಂತರದಲ್ಲಿವೆ. ಆದರೆ ಮಸ್ಕಿ ಪಟ್ಟಣಕ್ಕೆ ಸುಮಾರು 35- 40 ಕಿಮೀ.ನಷ್ಟು ದೂರವಾಗುತ್ತವೆ.
ಯಥಾಸ್ಥಿತಿಯಂತೆ ಲಿಂಗಸ್ಗೂರಲ್ಲೇ ಇರಲಿ: ಮಸ್ಕಿ ತಾಲೂಕು ವ್ಯಾಪ್ತಿಗೆ ಸದರಿ ಗ್ರಾಮಗಳನ್ನು ಸೇರಿಸಿದರೆ ಲಿಂಗಸ್ಗೂರು ತಾಲೂಕು ಕೇಂದ್ರ ಮಾರ್ಗವಾಗಿ ಮಸ್ಕಿಗೆ ಸಂಚರಿಸಬೇಕಾಗುತ್ತದೆ. ಸರ್ಕಾರ ಕೂಡಲೇ ಈಗಿರುವ ಮತದಾನ ಪಟ್ಟಿಯಂತೆ ಬರುವ ದಿನಗಳಲ್ಲಿ ತಾಲೂಕು ಪುನಾ ರಚನೆ ವೇಳೆ ಈ ಮೂರು ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರ್ಪಡೆಗೊಳಿಸದೆ ಯಥವತ್ತಾಗಿ ಮುಂದುವರಿಸಬೇಕು. ಇಲ್ಲದಿದ್ದರೆ ಬರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸಂಘಟನೆಗಳ ಬೆಂಬಲ: ತಾಲೂಕು ಪುನಃರಚನೆ ವೇಳೆ ಕುಪ್ಪಿಗುಡ್ಡ, ಸರ್ಜಾಪುರ ಮತ್ತು ಅಮರಾವತಿ ಗ್ರಾಮಗಳನ್ನು ನೂತನ ಮಸ್ಕಿ ತಾಲೂಕಿಗೆ ಸೇರ್ಪಡೆಗೊಳಿಸದೆ ಯಥಾವತ್ತಾಗಿ ಮುಂದುವರಿಸಬೇಕೆಂದು ಗ್ರಾಮಸ್ಥರು ನಡೆಸಿದ ಪಾದಯಾತ್ರೆಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಪಾದಯಾತ್ರೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಜಿಪಂ ಮಾಜಿ ಸದಸ್ಯ ಮಾಧವ ನೆಲೋಗಿ, ಮುಖಂಡರಾದ ಸಾಬಣ್ಣ ನೆಲೋಗಿ, ಶರಣಗೌಡ ಪಾಟೀಲ್, ಬಾಲಪ್ಪ ಮಾವಿನಮಟ್ಟಿ, ಯಮನಪ್ಪ, ಶರಣಗೌಡ ಪಾಟೀಲ್, ಲಕ್ಷ್ಮಣ ಗುಂಟ್ರಾಳ, ನವನಿರ್ಮಾಣ ಸೇನೆಯ ಹನುಮಂತ ನೆಲೋಗಿ, ನಿಜಗುಣಿ ಗುಂಟಿ, ಬಸವರಾಜ ಹಡಪದ, ಶೇಖರಪ್ಪ ಬಿಳವಾರ, ಯಂಕೋಬ ಆನ್ವರಿ, ರಮೇಶ ಮೇಟಿ ಸೇರಿದಂತೆ ಸರ್ಜಾಪೂರ, ಕುಪ್ಪಿಗುಡ್ಡ, ಅಮರಾವತಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು. ರೈತ ಸಂಘದ ಅಮರಣ್ಣ ಗುಡಿಹಾಳ, ಕರವೇ ಜಿಲಾನಿ ಪಾಶಾ, ಅಜೀಜ ಪಾಶಾ, ಶಿವರಾಜ ನಾಯಕ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

