ರಾಯಚೂರು

ರಾಜ್ಯ ಬಜೆಟ್ 2013: ಜನ ಏನಂತಾರೆ?

Published On :

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್ ಜನಸಾಮಾನ್ಯರಿಗೆ ಅಗತ್ಯವಿರುವ ಕುಡಿವ ನೀರು, ಶಿಕ್ಷಣ, ರಸ್ತೆ, ನೀರಾವರಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡದ ಬಜೆಟ್ ಆಗಿದೆ.
-ಶರಣಪ್ಪ ಮೇಟಿ, ಲಿಂಗಸ್ಗೂರು ಕಾಂಗ್ರೆಸ್

ಮುಖ್ಯಮಂತ್ರಿ ಶೆಟ್ಟರ್ ಮಂಡಿಸಿದ ಬಜೆಟ್ ರೈತರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಪೂರಕವಾಗಿದೆ. ಮಠ-ಮಾನ್ಯಗಳ ಅಭಿವೃದ್ಧಿ ಹಾಗೂ ಕೊರಮ ಸಮಾಜಕ್ಕೆ ಪ್ರತ್ಯೇಕ ಸಂಸ್ಥೆ ರಚನೆ ಮಾಡಿದೆ. ಮಹತ್ತರ ಬಜೆಟ್ ಇದಾಗಿದೆ
 - ರಮೇಶ ಜೋಷಿ, ತಾಲೂಕು ಬಿಜೆಪಿ

ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಅರ್ಥವಿಲ್ಲದ ಹಾಗೂ ರಾಜಕೀಯ ಪ್ರೇರಿತವಾಗಿದೆ. ಇದು ಅಭಿವೃದ್ಧಿ ಪರವಾಗಿಲ್ಲ.  ಹೈ.ಕ.ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು  ಕಾನೂನು ರೂಪಿಸುವಲ್ಲಿ ವಿಳಂಬ ಮಾಡುತ್ತಿದೆ
 -ಬಸವಂತರಾಯ ಕುರಿ, ಲಿಂಗಸ್ಗೂರು

ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ರೈತರ ಹಾಗೂ ನೀರಾವರಿ ಯೋಜನೆ ಕಡೆಗಣಿಸಿದೆ. ಹೈ.ಕ. ಭಾಗದ ಒಣ ಬೇಸಾಯಗಾರರಿಗೆ ಹಾಗೂ ಪಂಪ್‌ಸೆಟ್ ಹೊಂದಿದ ರೈತರಿಗೆ ಅನ್ಯಾಯವಾಗಿದ್ದು, ತಂತ್ರಗಾರಿಕೆ ಬಜೆಟ್ ಇದಾಗಿದೆ.
-ಅಮರಣ್ಣ ಗುಡಿಹಾಳ, ರಾಜ್ಯ ರೈತ ಸಂಘ

ರಾಜ್ಯದ ರೈತರಿಗೆ, ಕೂಲಿ-ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ರಸ್ತೆ, ಕುಡಿವ ನೀರು, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ರಂಗಗಳಲ್ಲಿ ಆದ್ಯತೆ ನೀಡಿದರೂ ಕಾರ್ಯಗತವಾಗದ ಬಜೆಟ್ ಆಗಿದೆ.
- ಪುರದಪ್ಪ ವಕೀಲರು

ಯಾದಗಿರಿ ಜಿಲ್ಲೆಯ 3 ತಾಲೂಕು ಸೇರಿ ರಾಜ್ಯದಲ್ಲಿ 43 ಹೊಸ ತಾಲೂಕುಗಳ ರಚನೆಗೆ ಒಪ್ಪಿಗೆ ದೊರೆತಿರುವುದು ಇತಿಹಾಸ. ರೈತಪರ ಬಜೆಟ್ ಇದು.  ಸಿಎಂ ಶೆಟ್ಟರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ರಾಜುಗೌಡ, ಸಣ್ಣ ಕೈಗಾರಿಕಾ ಸಚಿವ

ವಡಗೇರಾ ತಾಲೂಕು ರಚನೆ ಮಾಡಿದ್ದಕ್ಕೆ ಆಭಾರಿಯಾಗಿದ್ದೇನೆ. ಆದರೆ ಬಹುಸಂ ಖ್ಯೆಯಲ್ಲಿರುವ ಬಂಜಾರಾ ಸಮುದಾಯಕ್ಕಾಗಿ ಸೇವಾಲಾಲ ಜಯಂತಿಯನ್ನು ಸರ್ಕಾರವೇ ಆಚರಿಸುವ ನಿರ್ಧಾರ ಕೈಗೊಂಡಿಲ್ಲ.  
-ಡಾ. ಎ.ಬಿ. ಮಾಲಕರೆಡ್ಡಿ, ಶಾಸಕರು

3 ಹೊಸ ತಾಲೂಕು ರಚಿಸಿದ್ದು ಬಿಟ್ಟರೆ ಜಿಲ್ಲೆಗೆ ಯಾವ ಕೊಡುಗೆಯೂ ಸಿಕ್ಕಿಲ್ಲ. ಇದು ಹಿಂದಿನ ಬಜೆಟ್‌ನ ಪ್ರತಿರೂಪದಂತಿದೆ. ಬಜೆಟ್ ಗಾತ್ರ ಹೆಚ್ಚಾಗಿದೆಯೇ ಹೊರತು ಅದರಿಂದ ಲಾಭವೇನು? ಇದು  ಪಕ್ಕಾ ಚುನಾವಣಾ ಗಿಮಿಕ್.
-ಚೆನ್ನಾರೆಡ್ಡಿ ತುನ್ನೂರ, ಮಾಜಿ ಎಂಎಲ್ಸಿ

ಸರ್ಕಾರ ನೂತನ ತಾಲೂಕು ಕೇಂದ್ರಗಳನ್ನು ಘೋಷಿಸಿದೆ. ಆದರೆ ಅವುಗಳಿಗೆ ಸೌಲಭ್ಯ ಒದಗಿಸುವುದು, ಅನುಷ್ಠಾನ ಅಸಾಧ್ಯದ ಮಾತು.  ಬಜೆಟ್‌ನಲ್ಲಿನ ಭರವಸೆಗಳು ಈಡೇರುವುದಿಲ್ಲ. ಇದು ಬಿಜೆಪಿಯ ಚುನಾವಣೆ ಗಿಮಿಕ್ ಅಷ್ಟೇ.
-ಶಿವಶಂಕರ್, ಜೆಡಿಎಸ್ ಕಾರ್ಯದರ್ಶಿ

ಸಿರವಾರ ಮತ್ತು ಮಸ್ಕಿ ತಾಲೂಕು ಘೋಷಣೆ ಮಾಡಿದ್ದು ಸಾಧನೆ. ಅದನ್ನು ಬಿಟ್ಟರೆ ಜಿಲ್ಲೆಯ ಜನರ ನಿರೀಕ್ಷೆಗೆ ಬಜೆಟ್‌ನಲ್ಲಿ ಉತ್ತರವಿಲ್ಲ. ಸರ್ಕಾರಿ ನೌಕರರಿಗೆ ವಿಶೇಷವಾದ ಘೋಷಣೆಗಳಿಲ್ಲ.
     - ಮಹೆಬೂಬ್ ಪಾಷಾ ಮೂಲಿಮನಿ,  
                ಜಿಲ್ಲಾ ಸರ್ಕಾರಿ ನೌಕರರ ಸಂಘ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.