ಪಪಂ ಅಧ್ಯಕ್ಷರಿಗೆ ಮುತ್ತಿಗೆ
ಮುದಗಲ್: ಪಟ್ಟಣದ ಹೃದಯ ಭಾಗವಾಗಿರುವ ಪ.ಪಂ. ಸುತ್ತ ಮುತ್ತ ಸಾರ್ವಜನಿಕರಿಗೆ ಮೂತ್ರಾಲಯ ಇಲ್ಲದ ಕಾರಣ ಜನರು ಪ.ಪಂ. ನೂತನ ಕಟ್ಟಡದ ಗೋಡೆಯನ್ನು ಬಯಲು ಮೂತ್ರಾಲಯವನ್ನಾಗಿ ಮಾಡಿದ್ದಾರೆ. ನೂತನ ಮೂತ್ರಾಲಯ ಕಟ್ಟಡ ಕಾಮಗಾರಿ ವಿಳಂಬವಾಗಲು ಕಾರಣವೇನು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ.ಪಂ. ಅಧ್ಯಕ್ಷರಿಗೆ, ಮುಖ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿದರು.
ಕರವೇ ಕಾರ್ಯಕರ್ತರನ್ನುದ್ದೇಶಿಸಿ ಅಧ್ಯಕ್ಷೆ ಶರಣಮ್ಮ ಪಿ. ಮಠ ಮಾತನಾಡಿ, ಸಾರ್ವಜನಿಕ ಮೂತ್ರಾಲಯ ನಿಮಾರ್ಣಕ್ಕೆ ಎಸ್ಎಫ್ಸಿ ಯೋಜನೆಯಡಿ ರು. 2 ಲಕ್ಷ ಮಂಜೂರು ಮಾಡಿ ಟೆಂಡರ್ ಕಾಮಗಾರಿ ಗುತ್ತಿಗೆ ನೀಡಲಾಗಿದೆ.
ಗುತ್ತಿಗೆದಾರರು ಕಾಮಾಗಾರಿ ಆರಂಭಿಸಿದ್ದಾರೆ. ಕಾಮಗಾರಿ ಸ್ಥಗಿತಕ್ಕೆ ಕಾರಣ ತಿಳಿದಿಲ್ಲ. ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ಖಾಸಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದರು.
ಸಮರ್ಪಕ ಉತ್ತರ ನೀಡದೆ ಮುಖ್ಯಾಧಿಕಾರಿಗಳು ತಡವರಿಸಿದಾಗ ಕಾರ್ಯಕರ್ತರು ಇನ್ನು ನಾಲ್ಕು ದಿನಗಳೊಳಗಾಗಿ ಕಾಮಗಾರಿಯನ್ನು ಪುನಾ ಆರಂಭಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಕರವೇ ಅಧ್ಯಕ್ಷ ಎಸ್.ಎ. ನಹಿಂ, ಎಸ್.ಎನ್. ಖಾದ್ರಿ ಮೊದಲಾದವರು ಮುತ್ತಿಗೆಯಲ್ಲಿ ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರನ್ನು ಸಮಜಾಸಿದ ಅಧ್ಯಕ್ಷರು ಕಾಮಗಾರಿ ಪುನಾರಂಭಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

