ಮೈಸೂರು

ದೇಜಗೌಗೆ ಜ್ಞಾನಪೀಠ ಲಭಿಸಲಿ: ಡಾ. ಮಳಲಿ

Published On :

ಮೈಸೂರು:  ನಾಡಿನ ಹೆಸರಾಂತ ಸಾಹಿತಿ ಪ್ರೊ. ದೇಜಗೌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿ ಎಂದು ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಆಶಿಸಿದರು.   
ಕರ್ನಾಟಕ ವಿಚಾರ ವೇದಿಕೆಯು ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ಏರ್ಪಡಿಸಿದ್ದ ಸೈದ್ಧಾಂತಿಕ ನೆಲೆಯಲ್ಲಿ ಬುದ್ಧ, ಬಸವೇಶ್ವರ, ಅಂಬೇಡ್ಕರ್ ಎಂಬ ವಿಚಾರಧಾರೆ ಹಾಗೂ ನೂರರ ಹೊಸ್ತಿಲಿನಲ್ಲಿ  ಪ್ರೊ. ದೇಜಗೌ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಎಂಶ್ರೀ ಹಾಗೂ ಕುವೆಂಪು ಅವರನ್ನು ಬಿಟ್ಟರೆ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ದೇಜಗೌ ಅವರ ಹೋರಾಟ ಅವಿಸ್ಮರಣೀಯ. ಶಿಕ್ಷಣದಲ್ಲಿ ಕನ್ನಡ, ಆಡಳಿತದಲ್ಲಿ ಕನ್ನಡಕ್ಕಾಗಿ ಒತ್ತಾಯಿಸಿದವರು. ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಇಳಿ ವಯಸ್ಸಿನಲ್ಲಿ ಉಪವಾಸ ನಡೆಸಿದವರು. ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇಂತಹ ಧೀಮಂತ ಸಾಹಿತಿಗೆ ಈವರೆಗೆ ಜ್ಞಾನಪೀಠ ನೀಡಿದಿರುವುದು ಆಶ್ಚರ್ಯದ ಸಂಗತಿ. ಕೂಡಲೇ ಅವರಿಗೆ ಜ್ಞಾನಪೀಠ ಬರಲಿ ಎಂದು ಅವರು ಆಶಿಸಿದರು.   
ನೂರರ ಹೊಸ್ತಿಲಿಗೆ ಪದಾರ್ಪಣೆ ಮಾಡಿರುವ ಪ್ರೊ. ದೇಜಗೌ ಅವರನ್ನು ಸನ್ಮಾನಿಸಲಾಯಿತು. ಜಾನಪದ ವಿದ್ವಾಂಸ ಜಿ.ಎಸ್. ಭಟ್ಟ ಅಭಿನಂದನಾ ನುಡಿಗಳಾಡಿದರು.  
ಬುದ್ಧನ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಎಸ್. ಚಂದ್ರಕಿರಣ್, ಬಸವೇಶ್ವರರ ಕುರಿತು ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ಹಾಗೂ ಅಂಬೇಡ್ಕರ್ ಕುರಿತು ಮೈಸೂರು ವಿವಿಯ ಬಾಬು ಜಗಜೀವನರಾಂ  ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ. ಮೈಲಹಳ್ಳಿ ರೇವಣ್ಣ ಮಾತನಾಡಿದರು.   ಸಂಸ್ಕೃತಿ ಪೋಷಕ ಕೆ. ರಘುರಾಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಹಿರಿಮರಳಿ ಧರ್ಮರಾಜು, ನಿವೃತ್ತ ಉಪಲೋಕಾಯುಕ್ತ ಶಿವಬಸಪ್ಪ ಹೊರೆಯಾಲ ಮುಖ್ಯ ಅತಿಥಿಗಳಾಗಿದ್ದರು. ಜಿ. ಎಲ್. ವೀಣಾ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.