ಮೈಸೂರು

ಪರಂಪರೆ ಇಲಾಖೆ ನಿರ್ಲಕ್ಷ್ಯ: ಖಂಡನೆ

Published On :

ಮೈಸೂರು: ನಗರದ ಗನ್‌ಹೌಸ್ ಸಮೀಪ ಇತಿಹಾಸವಿರುವ ಬಾವಿಯಾಕಾರದ ದೊಡ್ಡ ಹೊಂಡ ಪತ್ತೆಯಾಗಿ ಹಲವು ದಿನಗಳು ಕಳೆದಿದ್ದರೂ ಅದರ ಬಗ್ಗೆ ಸಂಶೋಧನೆ ನಡೆಸದೆ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಆರೋಪಿಸಿದ್ದಾರೆ.
ಈ ಹೊಂಡವನ್ನು ಪರಿಶೀಲಿಸಿ, ಇದು ಯಾರ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದು, ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು, ಯಾವ ಪದಾರ್ಥಗಳನ್ನು ಉಪಯೋಗಿಸಿ ನಿರ್ಮಿಸಲಾಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುವಂತೆ ಇಲಾಖೆಗೆ ಪತ್ರ ಬರೆದಿದ್ದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇದು ಮೇಲ್ನೋಟಕ್ಕೆ ರಾಜರ ಆಳ್ವಿಕೆಯ ಕಾಲದ ಒಳಚರಂಡಿ ವ್ಯವಸ್ಥೆ. ಹೊಂಡದಲ್ಲಿನ ನೀರನ್ನು ಸಂಪೂರ್ಣ ಖಾಲಿ ಮಾಡಿಸಿಕೊಟ್ಟಲ್ಲಿ ಮತ್ತೊಮ್ಮೆ ಪರಿಶೀಲಿಸುವುದಾಗಿ ಒಕ್ಕಣೆ ಬರೆದ ಪತ್ರ ಕಳುಹಿಸಿದ್ದರು. ನಂತರ ಪಾಲಿಕೆಯಿಂದ ನೀರನ್ನು ಖಾಲಿ ಮಾಡಿಸಲಾಗಿದೆ. ಪುನಃ ಪರಿಶೀಲನೆ ನಡೆಸಿದ ಅಧಿಕಾರಿಗಳು ಇದು ಹಳೆ ಕಾಲದ ಚರಂಡಿ ವ್ಯವಸ್ಥೆ ಎಂದು ತಿಳಿಸಿದರು. ಆ ಹೊಂಡವನ್ನು ಮುಚ್ಚಲು ಹೋದಾಗ ಮತ್ತೊಂದು ಹೊಂಡ ದೊರಕಿತು. ಈ ಬಗ್ಗೆ ನಮಗೆ ಜಿಜ್ಞಾಸೆ ಮೂಡಿ ಸರಿಯಾದ ಮಾಹಿತಿ ನೀಡುವಂತೆ ಕೋರಿದರು. ಆದರೆ ಈವರೆಗೆ ಇಲಾಖೆ ಮಾತ್ರ ಸಂಶೋಧನೆ ನಡೆಸಿಲ್ಲ. ಈ ಹೊಂಡದ ಬಗ್ಗೆ ಮಾಹಿತಿ ಕಲೆ ಹಾಕುವ ಕಿಂಚಿತ್ತು ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.