ದುಡಿಮೆ ಕಡೆ ಗಮನ ನೀಡಿ
ಪಿರಿಯಾಪಟ್ಟಣ: ಮಹಿಳೆಯರು ದುಡಿಮೆ ಕಡೆಗೂ ಹೆಚ್ಚು ಒತ್ತುಕೊಟ್ಟಲ್ಲಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಜೆಎಸ್ಎಸ್ ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ರಮೇಶ್ ಹೇಳಿದರು.
ತಾಲೂಕಿನ ಕೋಣಸೂರು ಗ್ರಾಮದಲ್ಲಿ ಮೈರಾಡ ಸಂಸ್ಥೆ ಹಾಗೂ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆಯಿಂದ ಗ್ರಾಮದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಮನೆಗಳಲ್ಲಿ ಹೊಲಿಗೆ ಕಾರ್ಯದಲ್ಲಿ ತೊಡಗುವುದರಿಂದ ಹೆಚ್ಚು ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕೊಣಸೂರು ಗ್ರಾಪಂ ಸದಸ್ಯ ಲೋಕೇಶ್ ಮಾತನಾಡಿ, ಸಂಘ ಸಂಸ್ಥೆಗಳು ನೀಡುವ ತರಬೇತಿಗಳನ್ನು ಪಡೆದು ಸಾರ್ವಜನಿಕರು ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು. ಎಟ್ಲಿ ವರ್ಗದ ಜನರಿಗೂ ವಿವಿಧ ಸಂಘ ಸಂಸ್ಥೆಗಳು ಉಚಿತ ತರಬೇತಿ ಕೊಡುವ ಮೂಲಕ ಅವರ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿದ್ದು, ಇದರ ಪ್ರಯೋಜನವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೈರಾಡ ಸಂಸ್ಥೆಯ ನಿರ್ದೇಶಕ ಶಂಕರ್, ತಾಪಂ ಸದಸ್ಯ ಯೋಗೇಶ್, ತರಬೇತಿ ಶಿಕ್ಷಕಿ ಮಂಜುಳಾ, ಮುಖಂಡರಾದ ಆನಂದ್, ಮಹದೇವ್, ಚಂದ್ರಪ್ಪ, ಮೂರ್ತಿ, ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

