ಮೈಸೂರು

ತಂಬಾಕು ಬಿಡಿ, ಪರ್ಯಾಯ ಬೆಳೆ ಬೆಳೆಯಿರಿ

Published On :

ಪಿರಿಯಾಪಟ್ಟಣ: ರೈತರು ತಂಬಾಕು ಬೆಳೆಯೊಂದನ್ನೇ ಬೆಳೆಯುವ ಬದಲು ಪರ್ಯಾಯ ಬೆಳೆಗಳತ್ತಲೂ ಗಮನ ಹರಿಸುವುದು ಬಹಳ ಮುಖ್ಯ ಎಂದು ತಂಬಾಕು ಮಂಡಳಿಯ ಹರಾಜು ಅಧೀಕ್ಷಕ ಬಿ.ಮಂಜುರಾಜ್ ತಿಳಿಸಿದರು. ತಾಲೂಕಿನ ಬೋರೆಹೊಸಳ್ಳಿ ಗ್ರಾಮದಲ್ಲಿ ರೈತರಿಗಾಗಿ ಉತ್ತಮ ಕೃಷಿ ಪದ್ಧತಿ ಅಳವಡಿಕೆ ಬಗ್ಗೆ ತಂಬಾಕು ಮಂಡಳಿ ವತಿಯಿಂದ ಏರ್ಪಡಿಸಿದ್ದ ವೀಡಿಯೋ ಅನ್ ವೀಲ್ (ಜಿಎಪಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತಂಬಾಕಿಗೆ ಭವಿಷ್ಯ ಇರುವುದಿಲ್ಲ. ತಂಬಾಕು ಹದ ಮಾಡಲು ಹೆಚ್ಚಾಗಿ ಉರುವಲಿಗಾಗಿ ಕಾಡು ನಾಶವಾಗುತ್ತಿದೆ. ತಕ್ಷಣದಿಂದಲೇ ರೈತರು ಹಸಿರೀಕರಣ ಎಂಬ ಧ್ಯೇಯದ ಮೂಲಕ ತೋಟಗಾರಿಕಾ ಬೆಳೆಗಳನ್ನು, ಹತ್ತಿ, ರೇಷ್ಮೆ ಮುಂತಾದವುಗಳನ್ನು ಬೆಳೆಯುವಂತೆ ಸೂಚಿಸಿದರು. ವೀಡಿಯೋ ಚಿತ್ರಣದ ಮೂಲಕ ಅಧುನಿಕ ಕೃಷಿ ಪದ್ಧತಿ, ಸಸಿ ಮಡಿ ನಿರ್ವಹಣೆ, ನಾಟಿ ಕಾರ್ಯ, ಗೊಬ್ಬರ ನಿರ್ವಹಣೆ, ಅಂತರ ಬೇಸಾಯ, ಕಟಾವು, ಹದಗೊಳಿಸುವಿಕೆ, ಬೇಲು ಮಾಡಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವವರೆಗೂ ಪ್ರದರ್ಶಿಸುವುದರ ಜತೆಗೆ ಮಾಹಿತಿ ನೀಡಲಾಯಿತು. ಜಿಪಿಐ ಕಂಪನಿಯ ವಸಂತ್, ತಶಂಭುಲಿಂಗೇಗೌಡ, ಪ್ರಭಾಕರನ್, ಕ್ಷೇತ್ರ ಸಹಾಯಕ ಬೊಮ್ಮೇಗೌಡ, ರೈತರಾದ ಕರೀಗೌಡ, ಡಿ.ಸ್ವಾಮಿ, ಜಗದೀಶ್, ಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.