ಬೋನಿಗೆ ಬಿದ್ದ ಚಿರತೆ: ಜನ ನಿರಾಳ
ಹುಣಸೂರು: ತಾಲೂಕಿನ ಕೂಡ್ಲೂರು ಹಾಗೂ ತಟ್ಟೆಕೆರೆ ಗ್ರಾಮಗಳಲ್ಲಿ ಜಾನುವಾರು ಹಾಗೂ ನಾಯಿಗಳನ್ನು ಕೊಂದಿದ್ದ ಚಿರತೆ ಬೋನಿಗೆ ಬಿದ್ದಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಕರು, ಕುರಿ, ಮೇಕೆ ಹಾಗೂ ನಾಯಿಗಳನ್ನು ಹಗಲು ವೇಳೆಯೇ ತಿಂದು ಹಾಕುವ ಮೂಲಕ ಜನರನ್ನು ಭಯಭೀತಗೊಳಿಸಿತ್ತು. ಈ ಚಿರತೆಯನ್ನು ಹಿಡಿಯಲು ಕೊಂದಿದ್ದ ಕರುವಿನ ಮಾಂಸವನಿಟ್ಟಿದ್ದ 2 ಬೋನ್ಗಳನ್ನು ರೇವಣ್ಣರ ಜಮೀನಿನಲ್ಲಿಡಲಾಗಿತ್ತು. ರಾತ್ರಿ ವೇಳೆ ಮತ್ತೆ ಶಿಕಾರಿಗೆ ಬಂದ 3 ವರ್ಷದ ಗಂಡು ಚಿರತೆಯು ಮಾಂಸದಾಸೆಗಾಗಿ ಬೋನಿನೊಳಕ್ಕೆ ಬಂದ ವೇಳೆ ಅಲ್ಲೇ ಬಂಧಿಯಾಯಿತು. ಈ ಚಿರತೆಯನ್ನು ನಾಗರಹೊಳೆ ವಲಯದ ಪಾಲಾರ್ ಹಳ್ಳದಲ್ಲಿ ಬಿಡಲಾಯಿತೆಂದು ಎಸಿಎಫ್ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

