ಕಲೆ ನಂಬಿದವರಿಗೆ ಮೋಸ ಇಲ್ಲ'
ಮೈಸೂರು: ಕಲೆ ನಂಬಿದವರಿಗೆ ಎಂದೂ ಮೋಸ ಆಗುವುದಿಲ್ಲ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ಬಾಬು ಹೇಳಿದರು.
ಮೈಸೂರಿನ ವಿವೇಕಾನಂದನಗರದ ವೃತ್ತದ ಸಮೀಪದಲ್ಲಿರುವ ಕಲಾಧಾರೆ ಕಲ್ಚರಲ್ ಟ್ರಸ್ಟ್, ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಾತನಾಡಿ, 20 ವರ್ಷಗಳಿಂದ ಕಲೆ ನಂಬಿ ಜೀವನ ಸಾಗಿಸುತ್ತಿದ್ದೇನೆ. ಮಿಮಿಕ್ರಿಯಿಂದ ಅವಕಾಶ ಸಿಕ್ಕ ಕಡೆ ಪ್ರತಿಭೆ ಪ್ರದರ್ಶಿಸಿದೆ. ಅದೇ ಕಲೆ ಈಗ ನನ್ನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದಿದೆ ಎಂದರು.
ರಿಯಾಲಿಟಿ ಶೋಗಳು ಪ್ರಬಲ ಮಾಧ್ಯಮ ಆಗಿದೆ. ಆದರೆ, ಇತ್ತೀಚಿನ ಕೆಲವು ರಿಯಾಲಿಟಿ ಶೋಗಳು ಮಕ್ಕಳನ್ನು ನೋಯಿಸುವ ಕೆಲಸ ಮಾಡುತ್ತಿದೆ. ಸೋಲು ಗೆಲವಿಗಿಂತ ಪ್ರತಿಭಾ ಪ್ರದರ್ಶನ ಮುಖ್ಯ ಆಗಬೇಕು. ಪ್ರತಿಭೆಗೆ ವೇದಿಕೆ ಕಲ್ಪಿಸುವುದೇ ಮುಖ್ಯ ಎಂದ ಅವರು, ನಂತರ ಮಕ್ಕಳೊಂದಿಗೆ ಸಂವಾದ, ಮಿಮಿಕ್ರಿ ಮಾಡಿದರು.
ಚಿಂತಕ ಪ್ರೊ. ಪಿ.ವಿ. ನಂಜರಾಜ ಅರಸ್, ಪತ್ರಕರ್ತ ಈಚನೂರು ಕುಮಾರ್, ಮಕ್ಕಳ ತಜ್ಞ ಡಾ. ಪ್ರಶಾಂತ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನೃತ್ಯ ನಿರ್ದೇಶಕ ಸಿ. ಚಾಮರಾಜ್, ಮಂಜರಿ, ರಾಜೀವ್ ಕಶ್ಯಪ್, ಕಲಾ ಶಿಕ್ಷಕ ಕೆಂಪರಾಜ್, ಮಹದೇವು, ಪ್ರಕಾಶ್ ಇದ್ದರು.
ಬೋಗಾದಿಯಲ್ಲಿ ಬೇಸಿಗೆ ಶಿಬಿರ
ಮೈಸೂರು: ನಗರದ ಬೋಗಾದಿ ಉತ್ತರ ಬಡಾವಣೆಯ ಜಯವರ್ಧನ ಬಾಲ ಸಂಸ್ಕಾರ ಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ಜನಪದ ಆಟಗಳು, ಒಗಟುಗಳು, ರಸಪ್ರಶ್ನೆ, ರಾಮಾಯಣ, ಮಹಾಭಾರತದ ಕಥೆಗಳು, ಆರೋಗ್ಯ ಮತ್ತು ಪರಿಸರದ ಬಗ್ಗೆ ತಜ್ಞರಿಂದ ತಿಳಿವಳಿಕೆ ಮುಂತಾದ ಕಾರ್ಯಕ್ರಮಗಳಿಂದ ಮಕ್ಕಳಿಗೆ ಮನರಂಜನೆ ಹಾಗೂ ಜ್ಞಾನ ಬೋಧನೆ ಎರಡು ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಯಿತು. ಕನ್ನಡ ಪುಸ್ತಕಗಳ ಒಂದು ಪುಟ್ಟ ಗ್ರಂಥಾಲಯದ ಸದುಪಯೋಗವು ಮಕ್ಕಳಿಗೆ ದೊರೆಯಿತು. ಪ್ರತಿದಿನವೂ ಮಕ್ಕಳು ತಾವು ಕಲಿತ ವಿಷಯಗಳನ್ನು ಅನುಭವಗಳನ್ನೂ ದಿನಚರಿಯಲ್ಲಿ ಬರೆದರು. ಈ ಎಲ್ಲ ಕಾರ್ಯಗಳನ್ನು ಸವಿತಾ ಪ್ರಭಾಕರ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

