ಮೈಸೂರು

ವಿಶೇಷ ಶಿಕ್ಷಣ ತರಬೇತಿಗೆ ಅರ್ಜಿ

Published On :

ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹೆಲನ್ ಕೆಲ್ಲರ್ ಅಂಧ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2013-14ನೇ ಸಾಲಿನ ಮಕ್ಕಳ ವಿಶೇಷ ಶಿಕ್ಷಣದ ಡಿಎಡ್‌ಎಸ್‌ಇ (ವಿಐ) ಹಾಗೂ ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಿಕ್ಷಣದ ಡಿಎಡ್‌ಎಸ್‌ಇ (ಎಚ್‌ಐ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆಯಬಹುದು. ಈ ಸಾಲಿನಲ್ಲಿ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಬಹುದು. ಇದಕ್ಕಾಗಿ ನವದೆಹಲಿಯ ಆರ್‌ಸಿಐ ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡುತ್ತಿದೆ. ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿಯೂ ಪರೀಕ್ಷೆ ತೆಗೆದುಕೊಳ್ಳಬಹುದು.
ಈ ತರಬೇತಿಗೆ ಭರ್ತಿ ಮಾಡಿದ ಅರ್ಜಿಯನ್ನು ಆನ್‌ಲೈನ್ ಮೂಲಕ ಜೂ. 18ರ ಸಂಜೆ 5ರೊಳಗೆ ಹಾಗು ಚೆನ್ನೈನ ಸತ್‌ವತ್ ಇನ್ಫೂಸಲ್ ಸಂಸ್ಥೆಯಿಂದ ಅರ್ಜಿಯನ್ನು ಮೇ 22ರೊಳಗೆ ಪಡೆದು ಜೂ. 8ರೊಳಗೆ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಜೂ. 22 ರಿಂದ 30ರವರೆಗೆ ಆನ್‌ಲೈನ್ ಮೂಲಕ ನವದೆಹಲಿಯ ಆರ್‌ಸಿಐ ನಡೆಸಲಿದೆ. ಆನ್‌ಲೈನ್ ಪರೀಕ್ಷೆಗೆ ಪ್ರವೇಶ ಪತ್ರವನ್ನು ಜೂ. 10 ರಿಂದ 17ರೊಳಗೆ ಆನ್‌ಲೈನ್ ಮೂಲಕ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಆರ್‌ಸಿಐ ಹಾಗು ಸತ್‌ವತ್ ಇನ್ಫೂಸಲ್ ಸಂಸ್ಥೆ 23, ಲ್ಯಾಟಿಸ್ ಬ್ರಿಜ್ ರೋಡ್, 3ನೇ ಮಹಡಿ ಪಜ್ಜಾ ಕಾರ್ನರ್ ಬಿಲ್ಡಿಂಗ್ ಆದ್ಯಾರ್ ಚೆನ್ನೈ- 600020 ಅವರ ವೆಬ್‌ಸೈಟ್ ವಿಳಾಸದಿಂದ ಪಡೆಯಬಹುದು. ಆರ್‌ಸಿಐ ವೆಬ್‌ಸೈಟ್ ವಿಳಾಸ www.rehabcouncil.nic.in ಹಾಗೂ www.satvatonlineeexams.com  ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು (ತರಬೇತಿ) ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕನಗರ, ಮೈಸೂರು. ದೂ. 0821- 2491600 ಸಂಪರ್ಕಿಸಿ.

ಪ್ರೊ. ರಾಮದಾಸ್ ಸ್ಮರಣಾರ್ಥ ಲೇಖನ ಸ್ಪರ್ಧೆ
ಕ.ಪ್ರ.ವಾರ್ತೆ ಮೈಸೂರು ಮೇ 19
ವಿಚಾರವಾದಿ ಪ್ರೊ. ರಾಮದಾಸ್ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಪ್ರಗತಿಪರ ವಿಚಾರಗಳ ಪೂರ್ಣ ಲೇಖನಗಳ ಸ್ಪರ್ಧೆ ಆಯೋಜಿಸಿದೆ. ಜಾತಿ ವಿನಾಶದ ಹಾದಿಯಲ್ಲಿ ಯುವ ಜನಾಂಗದ ಪಾತ್ರ ಕುರಿತ ವಿಷಯ ಸೂಚಿಸಲಾಗಿದ್ದು, ಮೂರು ಅತ್ಯುತ್ತಮ ಲೇಖನಗಳಿಗೆ ರಾಮದಾಸ್ ಲೇಖನ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಲೇಖನಗಳು ಬಿಡಿ ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ, ಸ್ಪಷ್ಟವಾಗಿ ಕೈ ಬರಹದಲ್ಲಿ ಅಥವಾ ಡಿಟಿಪಿ ಮಾಡಿಸಿರಬಹುದು. ಲೇಖನ ಇದಕ್ಕೂ ಮುಂಚೆ ಬೇರೆಲ್ಲೂ ಪ್ರಕಟವಾಗಿರಬಾರದು. ನಾಲ್ಕು ಪುಟಗಳು ಮೀರಿರಬಾರದು.
ಲೇಖನವು ಈ ಮೇಲಿನ ವಿಷಯಕ್ಕೆ ಮಾತ್ರ ಸಂಬಂಧಿಸಿರಬೇಕು. ಕನ್ನಡದಲ್ಲಿ ಬರೆದ ಲೇಖನವನ್ನು ಕೃಷ್ಣ ಜನಮನ, ಕಾರ್ಯದರ್ಶಿ, ದೇಸಿರಂಗ ಸಾಂಸ್ಕೃತಿಕ ಸಂಸ್ಥೆ, ಎಲ್‌ಐಜಿ 30, 11ನೇ ತಿರುವು, ಗಂಗೋತ್ರಿ ಹುಡ್ಕೋ ಬಡಾವಣೆ, ಮೈಸೂರು- 570 009. ಈ ವಿಳಾಸಕ್ಕೆ ಜೂ. 10 ರೊಳಗೆ ಸಲ್ಲಿಸುವುದು. ಮೊ. 9844427129 ಸಂಪರ್ಕಿಸಬಹುದು.

ಎಂಎಸ್ಸಿ ಕೋರ್ಸ್‌ಗೆ ಅರ್ಜಿ ಆಹ್ವಾನ
ಕ.ಪ್ರ.ವಾರ್ತೆ ಮೈಸೂರು ಮೇ 19
ಮೈಸೂರು: ಯುವರಾಜ ಕಾಲೇಜಿನಲ್ಲಿ ಐದು ವರ್ಷಗಳ ಇಂಟಿಗ್ರೇಟೆಡ್ ಎಂ.ಎಸ್ಸಿ ಮಾಲಿಕ್ಯುಲರ್ ಬಯಾಲಜಿ ಕೋರ್ಸ್‌ಗಾಗಿ ಪಿಯುಸಿ ಹಾಗೂ ಸಮಾನ ವಿದ್ಯಾರ್ಹತೆಯುಳ್ಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಕಾಲೇಜು ಕಚೇರಿ ಪಡೆದುಕೊಳ್ಳಬಹುದು ಹಾಗೂ ಕಾಲೇಜಿನ ವೆಬ್‌ಸೈಟ್ www.yuvarajacollege.org ಅಥವಾ www.ycmmb.webs.com ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿಗಳನ್ನು, ಮೊ. 9448933006 ಅಥವಾ 08221-2419236 ಸಂಪರ್ಕಿಸಬಹುದು. ಇ-ಮೇಲ್- ycmmb2010@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.