ಮೈಸೂರು

ಎನ್‌ಎಸ್‌ಎಸ್ ಶಿಬಿರ ಪ್ರಾರಂಭ

Published On :

ಕ.ಪ್ರ.ವಾರ್ತೆ ಮೈಸೂರು  ಮೇ 16
ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಟಿ. ನರಸೀಪುರ ತಾಲೂಕು ವ್ಯಾಸರಾಜಪುರ ಗ್ರಾಮದಲ್ಲಿ ಮೇ 16 ರಿಂದ 22 ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ.
17 ರಂದು ಬೆಳಗ್ಗೆ 9 ಕ್ಕೆ ಸೋಸಲೆ ಗ್ರಾಪಂ ಅಧ್ಯಕ್ಷ ಅಣ್ಣಯ್ಯಸ್ವಾಮಿ ಶಿಬಿರ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ವ್ಯಾಸರಾಜಪುರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಶೋಭಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾರದ ವಿಲಾಸ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ. ಜೋಷಿ ಹನುಮಂತಚಾರ್ ಪ್ರಾಸ್ತಾವಿಕ ನುಡಿಗಳಾಡುವರು.
18ರಂದು ಬೆಳಗ್ಗೆ 10 ಕ್ಕೆ ಕೆ.ಆರ್. ಆಸ್ಪತ್ರೆ ರಕ್ತನಿಧಿ ವಿಭಾಗದಿಂದ ರಕ್ತದಾನ ಶಿಬಿರ ಹಾಗೂ ವಾಸನ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ವ್ಯಾಸರಾಜಪುರ ಪ್ರಾಥಮಿಕ ಕೇಂದ್ರದ ಡಾ. ಮಂಜುಪ್ರಸಾದ್ ಉದ್ಘಾಟಿಸುವರು.
19 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರಗೆ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ಕೆ.ಆರ್.ಆಸ್ಪತ್ರೆಯ ಡಾ. ಧರ್ಮೇಂದ್ರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. 20, 21 ಹಾಗೂ 22 ರಂದು ಕಾಲೇಜಿನ ವಿದ್ಯಾರ್ಥಿಗಳು ವ್ಯಾಸರಾಜಪುರದ ನಿವಾಸಿಗಳಿಗೆ ಅಪೌಷ್ಟಿಕತೆ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಡುವರು ಎಂದು ಪ್ರಾಂಶುಪಾಲ ಡಾ.ಕೆ. ಜೋಷಿ ಹುನುಮಂತಚಾರ್ ತಿಳಿಸಿದ್ದಾರೆ.

ವ್ಯಕ್ತಿ ನಾಪತ್ತೆ
ಮೈಸೂರು: ಸತ್ಯನಗರ ನಿವಾಸಿ ಮೆಹಬೂಬ್ ಶರೀಫ್ ಎಂಬವರ ಪುತ್ರ ಖದೀರ್ ಶರೀಫ್ (30) ನಾಪತ್ತೆಯಾಗಿದ್ದಾರೆ. ಬೀಡಿ ಕಾಲೋನಿ ನಿವಾಸಿ ರಫೀಕ್ ಎಂಬವ ಪುತ್ರಿ ರೇಷ್ಮಾಳನ್ನು 3 ವರ್ಷಗಳ ಹಿಂದೆ ವಾಚ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಖದೀರ್ ವಿವಾಹವಾಗಿದ್ದು, ದಂಪತಿ ನಡುವೆ ಮನಸ್ಥಾಪ ಉಂಟಾಗಿ ಮನೆ ಬಿಟ್ಟು ಹೋಗಿದ್ದಾನೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418309 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.